ನಿಷೇಧಿತ 5 ಕೋಟಿ ಝರಾಕ್ಸ್ ನೋಟು ಪತ್ತೆ.. 7 ಜನರ ಬಂಧನ

255

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ನಿಷೇಧಿತ 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟು ಕೊಟ್ಟು ವಂಚನೆ ಮಾಡುತ್ತಿದ್ದ ತಂಡವನ್ನು ಮಂಗಳವಾರ ಬಂಧಿಸಲಾಗಿದೆ. ಗೋವಿಂದಪುರ ಠಾಣೆ ಪೊಲೀಸರು ಒಟ್ಟು 7 ಜನರನ್ನು ಬಂಧಿಸಿದ್ದಾರೆ.

ಬಂಧಿತರಿಂದ ನಿಷೇಧಿತ 75 ಲಕ್ಷ ಅಸಲಿ ನೋಟುಗಳು ಹಾಗೂ ಝರಾಕ್ಸ್ ಮಾಡಿ ಮೋಸ ಮಾಡಲು ಯತ್ನಿಸಿದ್ದ 5 ಕೋಟಿ ಮೌಲ್ಯದ ಝರಾಕ್ಸ್ ನೋಟುಗಳ ಜೊತೆಗೆ 16 ಮೋಟೆ ಪೇಪರ್ ಗಳನ್ನು ವಶಕ್ಕೆ ಪಡೆದಿದ್ದಾರೆ. ನಾವು ಹಳೆ ನೋಟು ಕೊಡುತ್ತೇವೆ. ನೀವು ಕಡಿಮೆ ಪರ್ಸೆಂಟ್ ದಲ್ಲಿ ಹೊಸ ನೋಟು ಕೊಡಿ ಎಂದು ಜನರಿಗೆ ಮೋಸ ಮಾಡಲು ಯತ್ನಸಿದ್ದರು.

ಹಳೆ ನೋಟು ಕೊಡುವಾಗ ಅದರ ಜೊತೆಗೆ ಝರಾಕ್ಸ್ ನೋಟು ಇಡುವ ಸಲುವಾಗಿ ರಾಶಿ ರಾಶಿ ಝರಾಕ್ಸ್ ನೋಟು ಸಿದ್ಧಪಡಿಸಿದ್ದರು. ದಯಾನಂದ, ಮಂಜುನಾಥ ಸೇರಿ 7 ಜನರನ್ನು ಬಂಧಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!