ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಎಫ್ ಡಿಎ ಪರೀಕ್ಷೆಯ ಮರು ದಿನಾಂಕ ನಿಗದಿ ಮಾಡಲಾಗಿದೆ. ಫೆಬ್ರವರಿ 28ರಂದು ಪರೀಕ್ಷೆ ನಡೆಸಲಾಗುವುದು ಎಂದು ಕೆಪಿಎಸ್ ಸಿ ತಿಳಿಸಿದೆ. ಈ ಮೂಲಕ ಇಷ್ಟು ದಿನ ಕಾಯುತ್ತಿದ್ದ ಪರೀಕ್ಷಾರ್ಥಿಗಳಿಗೆ ಖುಷಿಯಾಗಿದೆ.
ಜನವರಿ 24ರಂದು ನಿಗದಿಯಾಗಿದ್ದ ಪರೀಕ್ಷೆಗೂ ಒಂದು ದಿನ ಮುಂಚೆ ಕೀ ಆನ್ಸರ್ ಲೀಕ್ ಮಾಡಲಾಗಿತ್ತು. ಇದ್ರಿಂದಾಗಿ ಪರೀಕ್ಷೆ ರದ್ದುಗೊಳಿಸಿ ಮರು ದಿನಾಂಕ ನಿಗದಿ ಮಾಡುವ ಬಗ್ಗೆ ತಿಳಿಸಲಾಗಿತ್ತು. ಈಗ ಫೆಬ್ರವರಿ 28ಕ್ಕೆ ಪರೀಕ್ಷೆ ನಡೆಸಲಾಗುವುದು ಎಂದು ಕೆಪಿಎಸ್ ಸಿ ಕಾರ್ಯಜದರ್ಶಿ ಜಿ.ಸತ್ಯವತಿ ತಿಳಿಸಿದ್ದಾರೆ.