ಫೆ.8ಕ್ಕೆ ಕಾವ್ಯ ಗಾಯನ

683

ಧಾರವಾಡ: ಅಭಿಜ್ಞಾ ಸಂಗೀತ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧಾರವಾಡ ಸಹಯೋಗದಲ್ಲಿ, ಫೆಬ್ರವರಿ 8ರ ಸಂಜೆ 6ಕ್ಕೆ ಭಕ್ತಿರಸ ತರಂಗಿಣಿ ಅನುಭಾವಿ ಕವಿಯತ್ರಿಯರ ಕಾವ್ಯ ಗಾಯನವನ್ನ ಆಲೂರು ವೆಂಕಟರಾವ ಸಭಾಭವನದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದ‌ ಅಧ್ಯಕ್ಷತೆಯನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಮಂಜುಳಾ ಯಲಿಗಾರ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಆಕಾಶವಾಣಿ ಹಿರಿಯ ರಂಗಕರ್ಮಿ  ಡಾ.ಶಶಿಧರ ನರೇಂದ್ರ ಭಾಗವಹಿಸಲಿದ್ದಾರೆ. ಅತಿಥಿ ಕಲಾವಿದರಾಗಿ  ಮಹಾನಂದ ಗೋಸಾವಿ, ಸಂಕೇತ ಸಪ್ರೆ, ಅನೂಪಕುಮಾರ ಸಿಂಘ್ ಆಗಮಿಸುವರು.

ಭಾರತೀಯ ಭಕ್ತಿ ಪರಂಪರೆಗೆ ಮಹಿಳಾ ಅನುಭಾವಿಗಳ ಕೂಡುಗೆ ವಿಷಯದ ಕುರಿತು ಗಾಯಕರಾದ ಮಹಾನಂದಾ ಗೋಸಾವಿ, ಸಂಕೇತ ಸಪ್ರೆ, ಅನೂಪಕುಮಾರ ಸಿಂಘ್ ಗಾಯನ ಪ್ರಸ್ತುತಪಡಿಸುವರು. ಬಸು ಹಿರೇಮಠ ಸಂವಾದಿನಿ, ಪ್ರಸಾದ ಮಡಿವಾಳರ ತಬಲಾ ಸಾಥ್ ನೀಡಲಿದ್ದಾರೆ ಎಂದು ಅಕಾಡೆಮಿಯ ಅಧ್ಯಕ್ಷೆ ಆರತಿ ಪಾಟೀಲ ಹಾಗೂ ಕಾರ್ಯದರ್ಶಿ ಡಾ.ಶಕ್ತಿ ಪಾಟೀಲ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!