ಕಲ್ಲಾಗಿ ಬದಲಾಗುತ್ತಿದೆ ಈ ಕಂದ

325

ಪ್ರಜಾಸ್ತ್ರ ಸುದ್ದಿ

ಬ್ರಿಟನ್: ಈ ಮುದ್ದಾದ ಮಗು ಕಲ್ಲಾಗಿ ಬದಲಾಗುತ್ತಿದೆ ಅಂದ್ರೆ ನಂಬಲು ಕಷ್ಟಸಾಧ್ಯವಾಗುತ್ತೆ. ಆದ್ರೂ ಇದು ಸತ್ಯ. 5 ತಿಂಗಳ ಲೆಕ್ಸಿ ರಾಬಿನ್ಸ್ ಅನ್ನೋ ಮಗುವಿಗೆ ಅತ್ಯಂತ ವಿರಳವಾದ, ಗುಣಪಡಿಸಲು ಸಾಧ್ಯವಿಲ್ಲದ ಫೈಬ್ರಾಡೈಸ್ ಪ್ಲಾಸಿಯಾ ಓಸಿಫಿಕಾನ್ಸ್ ಫ್ರೋಗ್ರೆಸ್ಸಿವಾ ಅನ್ನೋ ಕಾಯಿಲೆಯಿದೆ.

ಈ ಕಾಯಿಲೆಯಿಂದಾಗಿ ದೇಹದಲ್ಲಿ ಮೂಳೆಗಳು ಸರಿಯಾಗಿ ಬೆಳೆಯುವುದಿಲ್ಲ ಹಾಗೂ ಹೆಚ್ಚುವರಿ ಮೂಳೆಗಳು ಬೆಳೆಯುತ್ತಲೇ. ಇದನ್ನ ದೇಹ ಕಲ್ಲಾಗುವುದು ಎನ್ನಲಾಗುತ್ತೆ. 20 ವರ್ಷ ಆಗುತ್ತಿದ್ದಂತೆ ಸಂಪೂರ್ಣವಾಗಿ ಕಲಾಗುತ್ತಾರೆ. ಅಬ್ಬಾಬ್ಬ ಅಂದ್ರೆ 40 ವರ್ಷ ಬದುಕುಬಹುದು.

ಈ ರೀತಿಯ ಕಾಯಿಲೆ ಇರುವವರಿಗೆ ಲಸಿಕೆ, ಚುಚ್ಚು ಮದ್ದು ನೀಡಲು ಆಗುವುದಿಲ್ಲ. ಇದು 20 ಲಕ್ಷ ಜನರಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುವ ಕಾಯಿಲೆಯಾಗಿದೆ. ಅಲೆಕ್ಸ್ ಹಾಗೂ ಡೇವ್ ದಂಪತಿಗೆ ಜನವರಿ 31ರಂದು ಮಗು ಜನಿಸಿದೆ. ಹುಟ್ಟಿದಾಗ್ಲೇ ಹೆಬ್ಬೆರಳುಗಳು ಸರಿಯಾಗಿ ಚಲನೆಯಾಗುತ್ತಿರಲಿಲ್ಲ. ಇದನ್ನ ಕೇಳಿದ ಜನರಿಗೆ ಹೃದಯ ಹಿಂಡಿದಂತಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!