ಭಾರತದಲ್ಲಿದೆ ವರ ಖರೀದಿಸುವ ಮಾರುಕಟ್ಟೆ!

219

ಪ್ರಜಾಸ್ತ್ರ ವಿಶೇಷ

ಮಧುಬನಿ: ಮಾರುಕಟ್ಟೆ ಅಂದರೆ ಸಹಜವಾಗಿ ತರಕಾರಿ, ಹಣ್ಣು, ಮಾಂಸಹಾರ ಸೇರಿದಂತೆ ವಸ್ತುಗಳ ಖರೀದಿ ಮಾರುಕಟ್ಟೆ ಎನ್ನುತ್ತವೆ. ಇದನ್ನು ಬಿಟ್ಟರೆ ದನಕರುಗಳು, ಕುರಿಗಳ ಮಾರುಕಟ್ಟೆ ಇರುತ್ತವೆ. ಆದರೆ, ಭಾರತದಲ್ಲಿ ವರ ಮಾರಾಟ ಮಾಡುವ ಮಾರುಕಟ್ಟೆ ಇದೆ ಅಂದರೆ ನಂಬಲೇಬೇಕು.

ಹೌದು, ವಧು ತನಗೆ ಇಷ್ಟವಾದ ವರನನ್ನು ಖರೀದಿ ಮಾಡಬಹುದು. ಕುಟುಂಬ ಸಮೇತರಾಗಿ ಬಂದು ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಪದ್ಧತಿ ಬರೋಬ್ಬರಿ 900 ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಆ ಪ್ರದೇಶ ಇರುವುದು ಬಿಹಾರದ ಮಧುಬನಿ ಜಿಲ್ಲೆಯಲ್ಲಿ. ವಾರ್ಷಿಕವಾಗಿ ನಡೆಯುವ ವರ ಖರೀದಿಸುವುದಕ್ಕೆ ಸ್ಥಳೀಯವಾಗಿ ಸೌರತ್ ಸಭಾ ಎಂದು ಕರೆಯಲಾಗುತ್ತೆ. ಮೈಥಿಲ್ ಬ್ರಾಹ್ಮಣ ಸಮುದಾಯದವರು ಜಿಲ್ಲೆಯಾದ್ಯಂತ ತಮ್ಮ ಮಕ್ಕಳೊಂದಿಗೆ ಇಲ್ಲಿಗೆ ಬರುತ್ತಾರೆ.

ವರ್ಷದಲ್ಲಿ 9 ದಿನಗಳ ಕಾಲ ವರ ಖರೀದಿ ಮಾರುಕಟ್ಟೆ ಓಪನ್ ಇರುತ್ತೆ. ವರನ ಓದು, ವೃತ್ತಿ, ಜನನ ದಿನಾಂಕ ಸೇರಿದಂತೆ ಆತನ ಹಿನ್ನಲೆ ತಿಳಿದುಕೊಂಡು ಇಷ್ಟವಾದರೆ ಮದುವೆಯ ಮುಂದಿನ ಮಾತುಕತೆ ನಡೆಯುತ್ತವೆ. ಹೀಗಾಗಿ ಇಲ್ಲಿಗೆ ಬರುವ ವರಗಳು ವಿಶೇಷ ರೀತಿಯ ಉಡುಗೆಗಳನ್ನು ತೊಟ್ಟುಕೊಂಡು ಬರುತ್ತಾರೆ.

ವರ ಖರೀದಿ ಮಾರುಕಟ್ಟೆಗೆ 900 ವರ್ಷಗಳ ಇತಿಹಾಸ

ವರ ಖರೀದಿ ಮಾಡುವ ಮಾರುಕಟ್ಟೆ ಇಂದು ನಿನ್ನೆಯದಲ್ಲ. ಬರೋಬ್ಬರಿ 900 ವರ್ಷಗಳ ಇತಿಹಾಸವಿದೆ. ಕರ್ನಾಟ್ ರಾಜವಂಶದ ರಾಜ ಹರಿ ಸಿಂಗ್ ಆಡಳಿತದಲ್ಲಿ ಈ ಪದ್ಧತಿ ಜಾರಿಗೆ ಬಂದಿತು ಎಂದು ಹೇಳಲಾಗುತ್ತೆ. ವಿಭಿನ್ನ ಗೋತ್ರಗಳ ನಡುವೆ ಮದುವೆ, ಕುಟುಂಬದಲ್ಲಿಯೇ ಮದುವೆಯಾಗುವುದನ್ನು ಹಾಗೂ ವರ ದಕ್ಷಿಣೆ ಪದ್ಧತಿಯನ್ನು ತೆಗೆದು ಹಾಕುವ ಕಾರಣಕ್ಕೆ ಇದನ್ನು ಮಾಡಲಾಯಿತು ಅನ್ನೋದು ಸ್ಥಳೀಯರ ಮಾತು.

ಹೀಗೆ ವರ ಖರೀದಿಸುವ ಮಾರುಕಟ್ಟೆ ಇಂದಿಗೂ ಪ್ರಚಲಿತದಲ್ಲಿರುವುದು ನಿಜಕ್ಕೂ ವಿಚಿತ್ರ. ಆದರೆ, ಇದು ವಾಸ್ತವ ಅನ್ನೋದು ಸುಳ್ಳಲ್ಲ. ಸಾರ್ವಜನಿಕವಾಗಿ ಸಂಗಾತಿಯನ್ನು ಖರೀದಿಸುವುದು ಹಾಗೂ ಮಾರಾಟ ಅನ್ನೋದು ಎಷ್ಟರ ಮಟ್ಟಿಗೆ ಸರಿ ಅನ್ನೋದು ಈಗಿನವರ ಪ್ರಶ್ನೆಯಾಗಿದೆ.




Leave a Reply

Your email address will not be published. Required fields are marked *

error: Content is protected !!