ಪಿಎಸ್ ಸಿ ಪರೀಕ್ಷೆ ಪಾಸ್ ಮಾಡಿದ ತಾಯಿ-ಮಗ

218

ಪ್ರಜಾಸ್ತ್ರ ಸುದ್ದಿ

ಮಲಪ್ಪುರಂ: ಏನಾದರೂ ಸಾಧಿಸಬೇಕು ಅನ್ನೋ ಛಲ ಇದ್ದರೆ ವಯಸ್ಸು ಅಡ್ಡಿ ಅಲ್ಲ. ಕಠಿಣ ಪರಿಶ್ರಮ ಇದ್ದರೆ ಸಾಧ್ಯ ಅನ್ನೋದಕ್ಕೆ ಸಾಕಷ್ಟು ಸಾಧಕರು ಕಣ್ಮುಂದೆ ಇದ್ದಾರೆ. ಆ ಸಾಲಿಗೆ ಈ ತಾಯಿ, ಮಗ ಸೇರಿದ್ದಾರೆ.

ಕೇರಳದ ಮಲಪ್ಪುರಂನ 42 ವರ್ಷದ ಬಿಂದು ಹಾಗೂ ಇವರ 24 ವರ್ಷದ ಮಗ ವಿವೇಕ್ ಒಟ್ಟಿಗೆ ಪಿಎಸ್ ಸಿ(ಪಬ್ಲಿಕ್ ಸರ್ವಿಸ್ ಕಮಿಷನ್) ಪರೀಕ್ಷೆ ಪಾಸ್ ಆಗಿದ್ದಾರೆ. ಇವರ ಸಾಧನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಬಗ್ಗೆ ಮಾತನಾಡಿರುವ ವಿವೇಕ್, ನಾನು ನನ್ನ ತಾಯಿ ಕೋಚಿಂಗ್ ಹೋಗುತ್ತಿದ್ದೇವು. ತಾಯಿ ಹಾಗೂ ತಂದೆ ಇಬ್ಬರು ತುಂಬಾ ಬೆಂಬಲವಾಗಿ ನಿಂತಿದ್ದಾರೆ. ನಾವಿಬ್ಬರು ಒಟ್ಟಿಗೆ ಅಧ್ಯಯನ ಮಾಡುತ್ತಿದ್ದೇವು. ಆದರೆ, ಒಟ್ಟಿಗೆ ಆಯ್ಕೆ ಆಗುತ್ತೇವೆ ಅನ್ನೋ ಯೋಚನೆ ಸಹ ಇರಲಿಲ್ಲ. ಶಿಕ್ಷಕರ ಪ್ರೇರಣೆ ಸಹ ಇದೆ ಎಂದು ನೆನಪು ಮಾಡಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!