ಬ್ರೇಕಿಂಗ್ ನ್ಯೂಸ್
Search

ಈ ಕೇಶ ವಿನ್ಯಾಸಕಿಯ ಬಿಲ್ ಎಷ್ಟು ದುಬಾರಿ ಗೊತ್ತಾ?

253

ಪ್ರಜಾಸ್ತ್ರ ಲೈಫ್ ಸ್ಟೈಲ್

ಇವತ್ತಿನ ಲೈಫ್ ಸ್ಟೈಲ್ ಸದಾ ಟ್ರೆಂಡಿಯಾಗಿರಬೇಕೆಂದು ಬಯಸೋದು. ಹೀಗಾಗಿ ಬೆರಳಿನ ರಿಂಗ್ ನಿಂದ ಹಿಡಿದು ಪ್ರತಿಯೊಂದರಲ್ಲಿ ಹೊಸತನಕ್ಕೆ ಮುಂದಾಗ್ತಾರೆ. ಅದರಲ್ಲೂ ಹುಡ್ಗೀರು ಬ್ಯೂಟಿ ಪಾರ್ಲರ್ ಗಳ ಕಥೆ ಮತ್ತೊಂದು ರೀತಿಯಾಗಿದೆ.

ತುಂಬಾ ವಿಭಿನ್ನವಾಗಿ ಹೇರ್ ಸ್ಟೈಲ್ ಮಾಡುವವರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಇಲ್ಲೊಬ್ಬ ಕೇಶ ವಿನ್ಯಾಸಕಿಯ ಹೇರ್ ಸ್ಟೈಲ್ ಬಿಲ್ ಕೇಳಿದ್ರೆ ಶಾಕ್ ಆಗುತ್ತೆ. ಕ್ಯಾಲಿಫೋರ್ನಿಯಾ ಮೂಲದ ಕೇಶ ವಿನ್ಯಾಸಕಿ ಜಾಸ್ಮಿನ್ ಪೊಲಿಕಾರ್ಪೋ ಒಂದು ಗಂಟೆಗೆ 11 ಸಾವಿರ ರೂಪಾಯಿ ಬಿಲ್ ಮಾಡ್ತಾಳೆ.

ಯೆಸ್, ಜಾಸ್ಮಿನ್ ಕೆಲ ದಿನಗಳ ಹಿಂದೆ ಮಹಿಳೆಯೊಬ್ಬರಿಗೆ ಬರೋಬ್ಬರಿ 13 ಗಂಟೆಗಳ ಕಾಲ ಕೇಶ ವಿನ್ಯಾಸ ಮಾಡಿದ್ದಾಳೆ. ಅದಕ್ಕಾಗಿ ಆಕೆ ತೆಗೆದುಕೊಂಡಿದ್ದು 1.44 ಲಕ್ಷ ರೂಪಾಯಿ. ಅದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಳು. ಇದು ಸಾಕಷ್ಟು ವೈರಲ್ ಆಗಿ, ನೆಟ್ಟಿಗರು ಸಾಕಷ್ಟು ವಿಚಿತ್ರ ಕಾಮೆಂಟ್ಸ್ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!