ನಿನ್ನೆ ಶಾರೂಕ್ ಗೊತ್ತಿಲ್ಲಂದ ಸಿಎಂ ಇಂದು ಯೂ ಟರ್ನ್

186

ಪ್ರಜಾಸ್ತ್ರ ಸುದ್ದಿ

ಅಸ್ಸಾಂ: ಶಾರೂಕ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಾಹಂ ನಟನೆಯ ಪಠಾಣ್ ಚಿತ್ರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರು ಶನಿವಾರ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಅವರನ್ನು ಕೇಳಿದರೆ ಶಾರೂಕ್ ಖಾನ್ ಯಾರು? ನನಗೆ ಗೊತ್ತಿಲ್ಲ ಎಂದಿದ್ದರು.

ಭಾನುವಾರ ಯೂ ಟರ್ನ್ ಹೊಡೆದಿರುವ ಸಿಎಂ ಹಮಂತ್ ಬಿಸ್ವಾ ಶರ್ಮಾ, ಇಂದು ಮುಂಜಾನೆ 2 ಗಂಟೆಗೆ ಬಾಲಿವುಡ್ ನಟ ಶಾರೂಕ್ ಖಾನ್ ನನಗೆ ಫೋನ್ ಮಾಡಿದ್ದರು. ಪಠಾಣ್ ಚಿತ್ರದ ವಿರುದ್ಧದ ಪ್ರತಿಭಟನೆ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯ. ಅಹಿತಕರ ಘಟನೆಗಳು ನಡೆಯದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದೇನೆ ಅಂತಾ ಟ್ವೀಟ್ ಮಾಡಿದ್ದಾರೆ.

ಸಿಎಂ ನಡೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಖಂಡಿಸಲಾಗುತ್ತಿದೆ. ಮೊದಲು ಶಾರೂಕ್ ಖಾನ್ ಗೊತ್ತಿಲ್ಲ ಎಂದವರು, ಇಂದು ಫೋನ್ ಮಾಡಿದ್ದರು ಎಂದು ಹೇಳುತ್ತಿದ್ದಾರೆ ಅಂತಾ ವಾಗ್ದಾಳಿ ನಡೆಸಿದ್ದಾರೆ. ಯೂ ಟರ್ನ್ ಹೊಡೆದ ಸಿಎಂ ಎಂದು ಟ್ರೋಲ್ ಮಾಡಲಾಗುತ್ತಿದೆ.

ಪಠಾಣ್ ಚಿತ್ರದ ವಿರುದ್ಧ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ನಟಿ ದೀಪಿಕಾ ಪಡುಕೋಣೆ ಹಾಡುವೊಂದರಲ್ಲಿ ಹಾಕಿದ ಕೇಸರಿ ಬಣ್ಣದ ಡ್ರೇಸ್ ವಿಚಾರವಾಗಿ ವಿವಾದ ಮಾಡಿ, ಥಿಯೇಟರ್ ನಲ್ಲಿ ಗಲಾಟೆ ಮಾಡಿದ್ದರು. ಜನವರಿ 25ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.
Leave a Reply

Your email address will not be published. Required fields are marked *

error: Content is protected !!