ಸಿಎಂ ಕಾರ್ಯದರ್ಶಿ ಮನೆಗೆ ತಡರಾತ್ರಿ ನುಗ್ಗಿದ್ಯಾರು?

82

ಪ್ರಜಾಸ್ತ್ರ ಸುದ್ದಿ

ತೆಲಂಗಾಣ: ಸಿಎಂ ಕಾರ್ಯದರ್ಶಿ ಸ್ಮಿತಾ ಸಬರ್ವಾಲ್ ಅವರ ಮನೆಗೆ ತಡರಾತ್ರಿ ವ್ಯಕ್ತಿಯೊಬ್ಬ ನುಗ್ಗಿದ ಘಟನೆ ನಡೆದಿದೆ. ಈ ಕುರಿತು ಐಎಎಸ್ ಅಧಿಕಾರಿ, ತೆಲಂಗಾಣ ಸಿಎಂ ಕಾರ್ಯದರ್ಶಿ ಸ್ಮಿತಾ ಸಬರ್ವಾಲ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಅದೊಂದು ಕರಾಳ ರಾತ್ರಿಯಾಗಿದ್ದು, ಸಮಯಪ್ರಜ್ಞೆಯಿಂದ ಉಳಿದುಕೊಂಡಿದ್ದೇನೆ. ನಾವು ಎಷ್ಟೇ ಸುರಕ್ಷಿತ ಎಂದು ಭಾವಿಸಿದರೂ ಮನೆಯ ಬಾಗಿಲು, ಬೀಗಗಳನ್ನು ಸರಿಯಾಗಿ ಪರಿಶೀಲಿಸುವ ಪದ್ಧತಿಯನ್ನು ರೂಢಿಸಿಕೊಳ್ಳಬೇಕು ಎಂದು ಬರೆದುಕೊಂಡಿದ್ದಾರೆ.

ಈ ಘಟನೆ ಬಗ್ಗೆ ಕಾಂಗ್ರೆಸ್ ಟೀಕಿಸಿದೆ. ರಾಜ್ಯದಲ್ಲಿ ಮಹಿಳಾ ಐಎಎಸ್ ಅಧಿಕಾರಿಗೆ ರಕ್ಷಣೆ ಇಲ್ಲದೆ ಹೋದರೆ ಸಾಮಾನ್ಯ ಮಹಿಳೆಯರಿಗೆ ರಕ್ಷಣೆ ಸಿಗುತ್ತಾ ಎಂದು ಪ್ರಶ್ನಿಸಿದೆ.

ಯಾರು ಆ ಆಗಂತುಕ?

ಎರಡು ದಿನಗಳ ಹಿಂದೆ ರಾತ್ರಿ ಸುಮಾರು 11.30ರ ಸಮಯದಲ್ಲಿ ಸಿಎಂ ಕಾರ್ಯದರ್ಶಿ ಸ್ಮಿತಾ ಅವರ ಮನೆಗೆ ವ್ಯಕ್ತಿಯೊಬ್ಬ ಸೆಕ್ಯೂರಿಟಿ ಗಾರ್ಡ್ ಗೆ ಅಧಿಕಾರಿಯನ್ನು ಭೇಟಿಯಾಗಬೇಕು ಎಂದು ಹೇಳಿ ಒಳ ಬಂದಿದ್ದಾನೆ. ಮೇನ್ ಡೋರ್ ಲಾಕ್ ಮಾಡದ ಕಾರಣ ಸೀದಾ ಮನೆಯೊಳಗೆ ಬಂದು ಬೆಡ್ ರೂಂ ಬಾಗಿಲು ಬಡಿದಿದ್ದಾನೆ. ಎಷ್ಟು ಹೊತ್ತಿನಲ್ಲಿ ಯಾರು ಅಧಿಕಾರಿ ಸ್ಮಿತಾ ಏರು ಧ್ವನಿಯಲ್ಲಿ ಕೇಳಿದ್ದಾರೆ. ನಾನು ಉಪ ತಹಶೀಲ್ದಾರ್ ಎಂದು ಹೇಳಿದ್ದಾನೆ.

ಏರು ಧ್ವನಿಯಲ್ಲಿ ಸ್ಮಿತಾ ಅವರು ಆತನನ್ನು ಪ್ರಶ್ನಿಸಿ ಇಷ್ಟು ಹೊತ್ತಿನಲ್ಲಿ ಹೇಳದೆ ಕೇಳದೆ ಯಾಕೆ ಬಂದು ಎಂದಿದ್ದಾರೆ. ನಂತರ ಭಯದಿಂದ ಕಿರುಚಿಕೊಂಡಿದ್ದಾರೆ. ಆಗ ಸೆಕ್ಯೂರಿಟಿ ಗಾರ್ಡ್ ಬಂದು ಅವನನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಈ ಘಟನೆ ಖಂಡಿಸಿ ವಿಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.
Leave a Reply

Your email address will not be published. Required fields are marked *

error: Content is protected !!