ಬ್ರಿಟನ್ ಪ್ರಧಾನಿಗೆ ದಂಡ ವಿಧಿಸಿದ ಪೊಲೀಸರು

277

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ಲಂಡನ್: ಭಾರತದಲ್ಲಿ ರಾಜಕಾರಣಿಗಳು ಅಂದ್ರೆ ಅವರ ಕಾರುಬಾರು ಹೇಳತೀರದು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು ಸಹ ದೊಡ್ಡ ಪೋಸ್ ಕೊಡುತ್ತಾರೆ. ಇನ್ನು ಶಾಸಕರು, ಸಚಿವರು, ಸಂಸದರು ಕೇಳಬೇಕೆ? ಅದು ಬಿಡಿ ಪಕ್ಷಗಳ ಮುಖಂಡರು ಸಹ ಸರ್ಕಾರಿ ಅಧಿಕಾರಿಗಳ ಮೇಲೆ, ಸಾರ್ವಜನಿಕರ ಮೇಲೆ ದಬ್ಬಾಳಿಕೆ ಮಾಡುತ್ತಾರೆ. ಆದರೆ, ವಿಶ್ವದ ಅನೇಕ ದೇಶಗಳಲ್ಲಿ ಈ ರೀತಿಯ ಆಟ ನಡೆಯಲ್ಲ.

ಅನೇಕ ದೇಶಗಳ ಪ್ರಧಾನಿಗಳು ಸಾಮಾನ್ಯರಂತೆ ನಡೆದುಕೊಳ್ಳುತ್ತಾರೆ. ಮೆಟ್ರೋ, ಬಸ್ ಸಂಚಾರ ಮಾಡುತ್ತಾರೆ. ತಾವೆ ಕಾರು ಡ್ರೈವ್ ಮಾಡುತ್ತಾರೆ. ಅವರೇನಾದರೂ ತಪ್ಪು ಮಾಡಿದರೆ ಅಲ್ಲಿನ ಅಧಿಕಾರಿಗಳು ಅವರ ವಿರುದ್ಧವೂ ಕಾನೂನು ಅಸ್ತ್ರ ಪ್ರಯೋಗಿಸುತ್ತಾರೆ. ಅದಕ್ಕೆ ತಾಜಾ ಉದಾಹರಣೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಗೆ ಪೊಲೀಸರು ದಂಡ ವಿಧಿಸಿರುವುದು.

ಯೆಸ್, ಕಾರು ಸೀಟ್ ಬಿಲ್ಟ್ ಹಾಕದೆ ಇರುವುದಕ್ಕೆ ಪೊಲೀಸರು ಪ್ರಧಾನಿಗೆ ದಂಡ ಹಾಕಿದ್ದಾರೆ. ನಾಯಕತ್ವ ಬದಲಾವಣೆ, ಆರ್ಥಿಕ ಹಿಂಜರಿತ ಸೇರಿ ಹಲವು ಕಾರಣಗಳಿಗೆ ಕನ್ಸರ್ವೇಟಿವ್ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ. ಹೀಗಿರುವಾಗ ಉತ್ತರ ಇಂಗ್ಲೆಂಡ್ ಪ್ರವಾಸದ ವೇಳೆ ಕಾರು ಹಿಂಭಾಗದಲ್ಲಿ ಕುಳಿತ್ತಿದ್ದ ಪ್ರಧಾನಿ ರಿಷಿ ಸುನಕ್ ಸೀಟ್ ಬೆಲ್ಟ್ ಹಾಕಿರಲಿಲ್ಲ. ಜನರು ಇದನ್ನು ಖಂಡಿಸಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ದಂಡ ವಿಧಿಸಿ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ.

ಇದಕ್ಕೆ ಹೇಳೋದು ಭಾರತ ಇನ್ನು ಯಾಕೆ ಮೂಲಭೂತ ಸಮಸ್ಯೆಗಳಿಂದ ಹೊರ ಬಂದಿಲ್ಲ ಅಂತಾ. ನಾವು ಆಯ್ಕೆ ಮಾಡಿ ಕಳಿಸುವ ಜನಪ್ರತಿನಿಧಿಗಳ ತಪ್ಪನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಅದನ್ನು ಸರಿಯಾದ ರೀತಿಯಲ್ಲಿ ಚಲಾಯಿಸಿ ದೇಶದ ಅಭಿವೃದ್ಧಿಯಲ್ಲಿ ಜೊತೆಯಾಗಬೇಕು. ಇಲ್ಲದೆ ಹೋದರೆ ಜಾತಿ, ಧರ್ಮದ ದಳ್ಳುರಿಯಲ್ಲೇ ನಲುಗಬೇಕಾಗುತ್ತೆ.




Leave a Reply

Your email address will not be published. Required fields are marked *

error: Content is protected !!