ಈದ್ಗಾ ಮೈದಾನದಲ್ಲಿ ಧ್ವಜಾರೋಹಣ, ಧಾರ್ಮಿಕ ಘೋಷಣೆ ಇಲ್ಲ

156

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜಾರೋಹರಣ ಮಾಡಲಾಗುತ್ತದೆ. ಆದರೆ, ಅಲ್ಲಿ ಯಾವುದೇ ಧಾರ್ಮಿಕ ಘೋಷಣೆ ಕೂಗುವಂತಿಲ್ಲವೆಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಈ ಸ್ವತ್ತು ಕಂದಾಯ ಇಲಾಖೆಗೆ ಸೇರಿದೆ. ಅಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ ನಡೆಸಲಾಗುವುದು. ಬೆಂಗಳೂರು ಉತ್ತರ ಎಸಿ ಅವರು ಧ್ವಜಾರೋಹಣ ಮಾಡುತ್ತಾರೆ. ಆ ಭಾಗದ ಶಾಸಕರು, ಸಂಸದರು, ಜನಪ್ರತಿನಿಧಿಗಳು ವೇದಿಕೆ ಮೇಲೆ ಇರಲಿದ್ದಾರೆ. ಯಾವುದೇ ಸಂಘಟನೆಯವರು ಇರುವುದಿಲ್ಲ. ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದರು.

ಈ ವೇಳೆ ಭಾರತ ಮಾತಾ ಕೀ ಜೈ, ವಂದೇ ಮಾತರಂ, ಸ್ವಾತಂತ್ರ್ಯ ಯೋಧರ ಹೆಸರು ಮಾತ್ರ ಘೋಷಣೆ ಹಾಕಬೇಕು. ಯಾವುದೇ ಧಾರ್ಮಿಕ ಘೋಷಣೆ ಕೂಗುವಂತಿಲ್ಲವೆಂದು ವಿಧಾನಸೌಧದಲ್ಲಿ ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.




Leave a Reply

Your email address will not be published. Required fields are marked *

error: Content is protected !!