ಡಾಲಿ 25ನೇ ಚಿತ್ರದ ಟೀಸರ್ ನಾಳೆ ಬಿಡುಗಡೆ

170

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ ಡಾಲಿ ಧನಂಜಯ್ ನಟನೆಯ 25ನೇ ಚಿತ್ರ ಹೊಯ್ಸಳ ಚಿತ್ರದ ಟೀಸರ್ ನಾಳೆ ಬಿಡುಗಡೆಯಾಗುತ್ತಿದೆ. ಆನಂದ ಆಡಿಯೋ ಯುಟ್ಯೂಬ್ ಚಾನಲ್ ನಲ್ಲಿ ಬೆಳಗ್ಗೆ 9.27ಕ್ಕೆ ಟೀಸರ್ ರಿಲೀಸ್ ಮಾಡಲಾಗುತ್ತಿದೆ. ಖಡಕ್ ಪೊಲೀಸ್ ಪಾತ್ರದಲ್ಲಿ ನಟ ಧನಂಜಯ್ ಕಾಣಿಸಿಕೊಂಡಿದ್ದಾರೆ.

ಸಲಗ ಚಿತ್ರದ ಬಳಿಕ ಮತ್ತೊಮ್ಮೆ ಖಾಪ್ ಲುಕ್ ನಲ್ಲಿ ಎಂಟ್ರಿ ಕೊಡುತ್ತಿದ್ದಾರೆ. ಅಮೃತ ಅಯ್ಯಂಗಾರ ಸಾಥ್ ನೀಡಿದ್ದಾರೆ. ಅಚ್ಯುತ್ ಕುಮಾರ್, ಅವಿನಾಶ, ರಾಜೇಶ ನಟರಂಗ ಸೇರಿ ಅನೇಕರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಅಜನೀಶ್ ಲೋಕಾಥ್ ಮ್ಯೂಸಿಕ್, ಮಾಸ್ತಿ ಡೈಲಾಗ್, ಕಾರ್ತಿಕ್ ಎಸ್ ಕ್ಯಾಮೆರಾ ವರ್ಕ್ ಇದೆ. ಕೆಆರ್ ಜಿ ಸ್ಟುಡಿಯೋ ಅಡಿಯಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ.ರಾಜ್ ನಿರ್ಮಾಣ ಮಾಡಿದ್ದಾರೆ. ಮಾರ್ಚ್ 30ಕ್ಕೆ ಥಿಯೇಟರ್ ಗೆ ಹೊಯ್ಸಳನ ಆಗಮನವಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!