ಬ್ರೇಕಿಂಗ್ ನ್ಯೂಸ್
Search

ಅಕ್ರಮ ಕಟ್ಟಡ: ಬಿಬಿಎಂಪಿಗೆ ಡೆಡ್ ಲೈನ್ ಕೊಟ್ಟ ಹೈಕೋರ್ಟ್

184

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನಗರದಲ್ಲಿನ ಅಕ್ರಮ ಕಟ್ಟಡ ತೆರವು ಪ್ರಕರಣ ಸಂಬಂಧ ಹೈಕೋರ್ಟ್ ಎದುರು ಬಿಬಿಎಂಪಿ ಆಯಕ್ತ ಗೌರವ್ ಗುಪ್ತಾ ಹಾಜರಾದರು. ಈವರೆಗೆ ಎಷ್ಟು ಅಕ್ರಮ ಕಟ್ಟಡಗಳನ್ನು ಕೆಡವಲಾಗಿದೆ. ಹೈಕೋರ್ಟ್ ಆದೇಶವನ್ನು ಯಾಕೆ ಪಾಲಿಸುತ್ತಿಲ್ಲವೆಂದು ಕೇಳಲಾಯಿತು.

ವಿಭಾಗೀಯ ಪೀಠದ ನ್ಯಾಯಾಧೀಶರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿಬಿಎಂಪಿ ಪರ ವಕೀಲರು, 2020ರ ನಂತರ 5,905 ಕಟ್ಟಡಗಳ ಸರ್ವೇ ಮಾಡಲಾಗಿದೆ. ಇವುಗಳಲ್ಲಿ 4,279 ಕಟ್ಟಡಗಳು ನಕ್ಷೆ ಉಲ್ಲಂಘನೆ ಮಾಡಿದ್ದು, ಅವುಗಳಿಗೆ ನೋಟಿಸ್ ನೀಡಲಾಗಿದೆ. 2,591 ಕಟ್ಟಡಗಳ ಸರ್ವೇ ಬಾಕಿ ಉಳಿದಿದೆ. ನಕ್ಷೆಯಿಲ್ಲದೆ ನಿರ್ಮಾಣದ ಕಟ್ಟಡಗಳ ಸರ್ವೇ ಪ್ರಾರಂಭವಾಗಿಲ್ಲವೆಂದರು.

ಈ ಕೆಂಡಾಮಂಡಲವಾದ ನ್ಯಾಯಾಧೀಶರು ಅಕ್ರಮ ಕಟ್ಟಡಗಳು ತೆರವುಗೊಳಿಸಲು ಯಾಕೆ ಆಗುತ್ತಿಲ್ಲ. ಯಾವ ಕಾರಣಕ್ಕೆ ಹೆದರುತ್ತಿದ್ದೀರಿ. ಸಾರ್ವಜನಿಕ ಸ್ಥಳಗಳಲ್ಲಿನ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕು. ತೆರವುಗೊಳಿಸಿದ ಬಗ್ಗೆ ಫೋಟೋ ಸಮೀತ ವರದಿಯನ್ನು ಡಿಸೆಂಬರ್ 9ರ ಒಳಗೆ ಸಲ್ಲಿಸಬೇಕು ಎಂದರು.




Leave a Reply

Your email address will not be published. Required fields are marked *

error: Content is protected !!