ಸ್ಮಿತ್ ಶತಕ.. 338ಕ್ಕೆ ಆಸೀಸ್ ಆಲೌಟ್

232

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯದಲ್ಲಿ ಸ್ವೀವ್ ಸ್ಮಿತ್ 131, ಮೊರಾನ್ಸ್ 91 ಹಾಗೂ ವಿಲ್ ಪೊಕೊವಸ್ಕಿ 62 ರನ್ ಗಳ ಆಟದಿಂದಾಗಿ 338ಕ್ಕೆ ಮೊದಲ ಇನ್ನಿಂಗ್ಸ್ ಕಂಪ್ಲೀಟ್ ಮಾಡಿದೆ. ಸ್ಮಿತ್ ಭರ್ಜರಿ ಆಟದಿಂದಾಗಿ ಆಸ್ಟ್ರೇಲಿಯಾ ಟೀಂ 300ರ ಗಡಿ ದಾಟುವಂತಾಗಿದೆ. ಈ ಶತಕದೊಂದಿಗೆ ಸ್ಮಿತ್ 27ನೇ ಶತಕ ಬಾರಿಸಿದ್ರು.

ಕ್ಯಾಪ್ಟನ್ ಟಿಮ್ 1, ವಾರ್ನರ್ 5, ಮ್ಯಾಥೋ ವಾಡೆ 13, ಗ್ರೀನ್ 0, ಕಮಿನ್ಸ್ 0, ಸ್ಟ್ರಾರ್ಕ್ 24, ಲೇಯಾನ್ 0, ಹಝಲ್ ವುಡ್ 1 ರನ್ ಗೆ ಔಟ್ ಆದ್ರು. ಭಾರತದ ದಿಟ್ಟ ಬೌಲಿಂಗ್ ನಿಂದಾಗಿ 338ಕ್ಕೆ ಆಲೌಟ್ ಆಗಿದೆ. ಟೀಂ ಇಂಡಿಯಾ ಪರ ಜಡೇಜಾ ಭರ್ಜರಿ 4 ವಿಕೆಟ್ ಪಡೆದು ಮಿಂಚಿದ್ರು. ಇನ್ನು ಸೈನಿ, ಬೂಮ್ರಾ ತಲಾ 2 ವಿಕೆಟ್ ಪಡೆದ್ರು. ಸಿರಾಜ್ 1 ವಿಕೆಟ್ ಪಡೆದ.

ಮೊದಲ ಇನ್ನಿಂಗ್ಸ್ ನ 338 ರನ್ ಗಳ ಗುರಿ ಬೆನ್ನು ಹತ್ತಿರುವ ಟೀಂ ಇಂಡಿಯಾ ಶರ್ಮಾ 11, ಗಿಲ್ 14 ರನ್ ಬಾರಿಸುವ ಮೂಲಕ ವಿಕೆಟ್ ನಷ್ಟವಿಲ್ಲದೆ 26 ರನ್ ಗಳಿಸಿ ಆಡುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!