ಧೂಳೆಬ್ಬಿಸಿದ ಕೆಜಿಎಫ್-2 ಟೀಸರ್

268

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಒಂದು ಕಾಲದಲ್ಲಿ ಕೆಜಿಎಫ್ ಅಂದ್ರೆ ಚಿನ್ನದಗಣಿ ಕೋಲಾರ ಎಂದು ಹೇಳ್ತಿದ್ರು. ಆದ್ರೆ, ಕಳೆದ ಎರಡ್ಮೂರು ವರ್ಷಗಳಲ್ಲಿ ಅದು ಬದಲಾಗಿದೆ. ಕೆಜಿಎಫ್ ಅಂದ್ರೆ ರಾಕಿಂಗ್ ಸ್ಟಾರ್ ಯಶ ಸಿನಿಮಾ ಅಂತಾರೆ. ಅಷ್ಟರ ಮಟ್ಟಿಗೆ ಸೌಂಡ್ ಮಾಡಿದ್ದು ಫಸ್ಟ್ ಚಾಪ್ಟರ್.

ಇದೀಗ ಚಾಪ್ಟರ್ 2 ಅಬ್ಬರಿಸಲು ಬರ್ತಿದೆ. ಅದಕ್ಕೂ ಮೊದ್ಲೇ ನಟ ಯಶ ಹುಟ್ಟು ಹಬ್ಬಕ್ಕಾಗಿ ಬಿಟ್ಟಿರುವ ಟೀಸರ್ ಮತ್ತಷ್ಟು ಹವಾ ಕ್ರಿಯೇಟ್ ಮಾಡಿದೆ. ರಾಕಿಂಗ್ ಸ್ಟಾರ್ ಅಭಿಮಾನಿಗಳು ಟೀಸರ್ ನೋಡಿ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎಂದು ಕಾಯುತ್ತಿದ್ದಾರೆ.

ಹೊಂಬಾಳೆ ಕ್ರಿಯೇಷನ್ಸ್ ನಲ್ಲಿ ಈ ಚಿತ್ರ ಮೂಡಿ ಬರ್ತಿದೆ. ನಿರ್ದೇಶಕ ಪ್ರಶಾಂತ ನೀಲ್, ಮತ್ತೊಂದು ಹೊಸ ದಾಖಲೆ ಬರೆಯಲು ಮುಂದಾಗಿದ್ದಾರೆ. ವಿಜಯ ಕಿರಂಗದೂರ ಬಂಡವಾಳ ಹೂಡಿರುವ ಚಿತ್ರ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಲು ರೆಡಿಯಾಗಿದೆ.




Leave a Reply

Your email address will not be published. Required fields are marked *

error: Content is protected !!