ಆಟ ಇನ್ನೂ ಬಾಕಿಯಿದೆ ಎಂದ ಇಂಗ್ಲೆಂಡ್ ಕ್ಯಾಪ್ಟನ್

259

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಲಂಡನ್: ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ದಾಖಲಿಸಿದೆ. 151 ರನ್ ಗಳ ಅಂತರದಿಂದ ಜೋ ರೂಟ್ ಪಡೆ ಸೋಲು ಅನುಭವಿಸಿದೆ. ಇದ್ರಿಂದಾಗಿ ಟೀಂ ಇಂಡಿಯಾ 5 ಪಂದ್ಯಗಳಲ್ಲಿ 1-0 ಮುನ್ನಡೆ ಸಾಧಿಸಿದೆ.

ಕೊಹ್ಲಿ ಪಡೆ 2ನೇ ಇನ್ನಿಂಗ್ಸ್ ನಲ್ಲಿ 298 ರನ್ ಗಳಿಸಿದ್ರಿಂದ ಇಂಗ್ಲೆಂಡ್ ಟೀಂಗೆ 271 ರನ್ ಗುರಿ ನೀಡಲಾಗಿತ್ತು. ಭಾರತದ ಭರ್ಜರಿ ಆಟದಿಂದಾಗಿ 51.5 ಓವರ್ ಗಳಲ್ಲಿ 120 ರನ್ ಗಳಿಗೆ ಆಲೌಟ್ ಆಯ್ತು. ಈ ಪಂದ್ಯದಲ್ಲಿ ಬೌಲರ್ ಗಳಾದ ಮೊಹಮ್ಮದ ಶೆಮಿ ಹಾಗೂ ಬೂಮ್ರಾ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಶೆಮಿ ಅರ್ಧ ಶತಕ ಸಹ ಗಳಿಸಿದ್ರು.

ಈ ಬಗ್ಗೆ ಮಾತ್ನಾಡಿರುವ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್, ಈ ಸೋಲಿನಿಂದ ಭಯ ಪಡುವಂತದ್ದು ಏನಿಲ್ಲ. ಇನ್ನು ಆಟ ಬಾಕಿಯಿದೆ ಎಂದು ಹೇಳುವ ಮೂಲಕ ಇನ್ನು 3 ಪಂದ್ಯಗಳಿದ್ದು ಏನು ಬೇಕಾದರೂ ಆಗಬಹುದು ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!