ಫೈನಲ್ ನಲ್ಲಿ ಯಡವಿದ ಭಾರತ: ಆಸೀಸ್ ಚಾಂಪಿಯನ್

345

ಮೆಲ್ಬೋರ್ನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮಹಿಳೆಯರ ಟಿ-20 ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಯಡವಿದ ಭಾರತ ಚಾಂಪಿಯನ್ಸ್ ಪಟ್ಟದಿಂದ ವಂಚಿತವಾಯ್ತು. ಆಸ್ಟ್ರೇಲಿಯಾ ನೀಡಿದ್ದ 156 ರನ್ ಗಳ ಟಾರ್ಗೆಟ್ ರೀಚ್ ಆಗುವ ಕೊನೆಯ ಹಂತದಲ್ಲಿ ಕ್ಯಾಪ್ಟನ್ ಹರ್ಮನ್ ಪ್ರೀತ ಕೌರ್ ಟೀಂ ಮುಗ್ಗರಿಸಿತು.

ಸ್ಮೃತಿ ಮಂದಾನ

ಸ್ಮೃತಿ ಮಂದಾನ 66 ರನ್ ಗಳ ಏಕಾಂಗಿ ಹೋರಾಟ ವ್ಯರ್ಥವಾಯ್ತು. ರಿಚ್ಚಾ ಘೋಷ ಬಾರಿಸಿದ 17 ರನ್ ಎರಡನೇ ಹೆಚ್ಚಿನ ಸ್ಕೋರ್. ಇದರ ಹೊರತಾಗಿ ಯಾವ ಆಟಗಾರರು ಕ್ರಿಸ್ ನಲ್ಲಿ ಗಟ್ಟಿಯಾಗಿ ನಿಲ್ಲಲಿಲ್ಲ. ಹೀಗಾಗಿ ಗೆಲ್ಲಬಹುದಾದ ಸ್ಕೋರ್ ಕಂಪ್ಲೀಟ್ ಮಾಡಲು ಆಗದೇ 144 ರನ್ ಗಳಿಗೆ ಆಲೌಟ್ ಆಯ್ತು. ಆಸ್ಟ್ರೇಲಿಯಾ ಪರ ಜೆಸ್ ಜಾನ್ಸನ್ 4 ಓವರ್ ನಲ್ಲಿ 12 ರನ್ ಗೆ 5 ವಿಕೆಟ್ ಪಡೆದು ಗೆಲುವಿಗೆ ಪಾತ್ರವಾದ್ಳು. ಟೈಲಾ 2, ಇಲ್ಸಾ, ಮೆಗಾನ್, ಆನ್ ಬೆಲ್ ತಲಾ 1 ವಿಕೆಟ್ ಪಡೆದ್ರು.

ಟಾಸ್ ಗೆದ್ದು ಬ್ಯಾಟ್ ಮಾಡಿದ ಆಸೀಸ್ ಟೀಂಗೆ ಬೆತ್ ಮೊನಿಯ ಭರ್ಜರಿ 71 ರನ್ ಆಟದಿಂದ 20 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಲು ಸಾಧ್ಯವಾಯ್ತು. ಇಂಡಿಯಾ ಪರ ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್ವಾಡ ತಲಾ 2 ವಿಕೆಟ್ ಪಡೆದ್ರು. ರಾಧಾ ಯಾದವ ಹಾಗೂ ಅರುಧಂತಿ ರೆಡ್ಡಿ ತಲಾ 1 ವಿಕೆಟ್ ಪಡೆದ್ರು. ಇಂಡಿಯಾ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ 7 ಟಿ-20 ತ್ರಿಕೋನ್ ಸರಣಿಯಲ್ಲಿ ಆಸ್ಟ್ರೇಲಿಯಾ ಅಂತಿಮವಾಗಿ ಚಾಂಪಿಯನ್ಸ್ ಆಯ್ತು.




Leave a Reply

Your email address will not be published. Required fields are marked *

error: Content is protected !!