ಟಿ-20 ಮಹಿಳಾ ಏಷ್ಯಾಕಪ್: ಫೈನಲ್ ಗೆ ಭಾರತ

309

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಸಿಲೆಟ್: ಮಹಿಳೆಯರ ಟಿ-20 ಏಷ್ಯಾಕಪ್ ನಲ್ಲಿ ಭಾರತ ತಂಡ ಅದ್ಭುತ್ ಪ್ರದರ್ಶನ ನೀಡುತ್ತಿದ್ದು, ಗುರುವಾರ ಥೈಯ್ಲೆಂಡ್ ವಿರುದ್ಧ 74 ರನ್ ಅಂತರದ ಗೆಲುವು ಸಾಧಿಸುವ ಮೂಲಕ ಫೈನಲ್ ಪ್ರವೇಶಿಸಿದೆ.

ಟಾಸ್ ಗೆದ್ದ ಥೈಯ್ಲೆಂಡ್ ನಾಯಕಿ ನೆರುಮಾಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಹರ್ಮನ್ ಪ್ರೀತ್ ಕೌರ್ ಟೀಂ 6 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತು. ಶಫಾಲಿ ವರ್ಮಾ 28 ಎಸೆತಗಳಲ್ಲಿ 48 ರನ್ ಗಳಿಸಿದರು. ಕೌರ್ 36, ರಾಡ್ರಿಗಸ್ 27 ರನ್ ಗಳಿಸಿದರು.

ಟಿ-20 ಟೂರ್ನಿಯಲ್ಲಿ 148 ರನ್ ಬಿಗ್ ಸ್ಕೋರ್ ಅಲ್ಲ. ಆದರೆ, ಟೀಂ ಇಂಡಿಯಾದ ಭರ್ಜರಿ ಬೌಲಿಂಗ್ ನಿಂದಾಗಿ 9 ವಿಕೆಟ್ ಕಳೆದಕೊಂಡು 74 ರನ್ ಮಾತ್ರ ಗಳಿಸಿತು. ಇದರಿಂದಾಗಿ ಟೀಂ ಇಂಡಿಯಾ 74 ರನ್ ಅಂತರದಿಂದ ಗೆದ್ದು ಫೈನಲ್ ಪ್ರವೇಶಸಿತು.

ದೀಪ್ತಿ ಶರ್ಮಾ 3, ರಾಜೇಶ್ವರಿ ಗಾಯಕ್ವಾಡ 2, ರೇಣುಕಾ ಸಿಂಗ್, ಸ್ನೇಹ್ ರಾಣಾ, ಶೆಫಾಲಿ ವರ್ಮಾ ತಲಾ 1 ವಿಕೆಟ್ ಪಡೆದರು. ಶ್ರೀಲಂಕಾ-ಪಾಕ್ ನಡುವಿನ ಪಂದ್ಯದಲ್ಲಿ ಯಾರು ಗೆದ್ದು ಫೈನಲ್ ಗೆ ಬರುತ್ತಾರೋ ಅವರು ಅಕ್ಟೋಬರ್ 15ರಂದು ಪ್ರಶಸ್ತಿಗಾಗಿ ಕಾದಾಟ ನಡೆಸಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!