ಸಾವಯವ ಕೃಷಿಗೆ ರೈತರ ಸ್ಪಂದನೆ ಮುಖ್ಯ: ಅಶೋಕ ಅಲ್ಲಾಪೂರ

155

ಪ್ರಜಾಸ್ತ್ರ ಸುದ್ದಿ

ಸಿಂದಗಿ: ರೈತರು ಸಾವಯವ ಕೃಷಿ ಬಗ್ಗೆ, ಸರ್ಕಾರದಿಂದ ಸಿಗುವ ಸೌಲಭ್ಯ ಬಗ್ಗೆ ತಿಳಿದುಕೊಳ್ಳಬೇಕು. ಈ ಕುರಿತು ನಾವು ಸಾಕಷ್ಟು ಕೆಲಸ ಮಾಡುತ್ತಿದ್ದರೂ ರೈತರ ಸ್ಪಂದನೆ ಸರಿಯಾಗಿ ಸಿಗುತ್ತಿಲ್ಲವೆಂದು ಚನ್ನವೀರ ಶಿವಾಚಾರ್ಯ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಅಶೋಕ ಅಲ್ಲಾಪೂರ ಬೇಸರ ವ್ಯಕ್ತಪಡಿಸಿದರು.

ಕಂಪನಿಯು 2 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸದಸ್ಯರು, ರೈತರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು. ಈ ವೇಳೆ ಮಾತನಾಡಿದ ಅವರು, ನಮ್ಮ ಹೊಲದ ಮಣ್ಣು ಹೇಗಿದೆ. ಅದರಲ್ಲಿ ಎಷ್ಟು ಪ್ರಮಾಣ ಕಾರ್ಬನ್ ಇದೆ. ಮಣ್ಣಿನ ಫಲವತ್ತೆ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಅವಶ್ಯಕತೆ ಇದೆ. ಇದನ್ನು ನಾವು ನಿರ್ಲಕ್ಷ್ಯ ಮಾಡಿದರೆ 10 ವರ್ಷಗಳಲ್ಲಿ ಫಲವತ್ತಾದ ಭೂಮಿ ಇರಲ್ಲ. ಹೀಗಾಗಿ ರೈತ ಉತ್ಪಾದಕ ಕಂಪನಿಗಳೊಂದಿಗೆ ಈ ಜೋಡಿಸಿ. ಸಾವಯವ ಕೃಷಿಗೆ ಬೇಕಾದ ಸಾಮಗ್ರಿಗಳನ್ನು ಪಡೆದುಕೊಳ್ಳಬೇಕು. ಕುರಿ, ಕೋಳಿ ಸಾಕಾಣಿಕೆ, ಹೈನುಗಾರಿಕೆ ಸೇರಿದಂತೆ ಏನೆಲ್ಲ ಸೌಲಭ್ಯಗಳು ಸರ್ಕಾರದಿಂದ ಸಿಗುತ್ತವೆ ಅನ್ನೋದನ್ನು ತಿಳಿಸುವುದರ ಜೊತೆಗೆ ನಿಮ್ಮೊಂದಿಗೆ ನಾವು ಇರುತ್ತೆ. ಸಧ್ಯ ನಮ್ಮ ಕಂಪನಿಯಲ್ಲಿ 500 ರೈತರು ಸದಸ್ಯರಿದ್ದು, ಇನ್ನು 500 ರೈತರ ಸದಸ್ಯತ್ವದ ಗುರಿ ಹೊಂದಲಾಗಿದೆ ಎಂದರು.

ಮುದ್ದೇಬಿಹಾಳದ ಪ್ರಗತಿಪರ ರೈತ ಅರವಿಂದ ಕೊಪ್ಪ ಅವರು ರೈತರಿಗೆ ವಿಶೇಷ ಉಪನ್ಯಾಸ ನೀಡಿದರು. ಅತಿಥಿಗಳಾಗಿ ಬಿ.ಪಿ ಹುಲಸಗುಂದ, ನಿಂಗಣ್ಣ ಭಾವಿಕಟ್ಟಿ, ಶಂಕ್ರಪ್ಪ ನಿಗಡಿ,  ರಮೇಶ ಪೂಜಾರಿ, ಶಂಕ್ರಪ್ಪ ಅಂಬಲಿ, ಪರಮಾನಂದ ಸಂಸ್ಥೆಯ ಕಾರ್ಯದರ್ಶಿ ಮಹಾದೇವ ಅಂಬಲಿ, ಹೆಚ್ ಡಿಎಫ್ ಸಿ ಬ್ಯಾಂಕ್ ಮಾನ್ಯೇಜರ್ ಮಹೇಂದ್ರಕರ್, ಕೀರ್ತಿ ಗ್ರೂಪ್ ಕಂಪನಿಯ ಕರ್ಪೂರಮಠ, ಎಡಿಡಿಎ ಕಂಪನಿಯ ಮಂಜುಳಾ ಹಾಜರಿದ್ದರು.

ಈ ವೇಳೆ ತಾಲೂಕಿನ ಸುತ್ತುಮುತ್ತಲಿನ ಹಲವು ಗ್ರಾಮಗಳ ನೂರಾರು ರೈತರು ಭಾಗವಹಿಸಿದ್ದರು.




Leave a Reply

Your email address will not be published. Required fields are marked *

error: Content is protected !!