ರಕ್ತ ಬೀಜಾಸರ ಉಗ್ರನ ಸಂಹಾರದ ಹಿಂದಿದೆ ಈ ಶ್ವಾನ

401

ಸ್ಪೆಷಲ್ ಸ್ಟೋರಿ: ನ್ಯೂಸ್ ಡೆಸ್ಕ್

ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ ಉಗ್ರ ಸಂಘಟನೆ ಮುಖ್ಯಸ್ಥ ಅಬುಬುಕರ್ ಅಲ್ ಬಗ್ದಾದಿಯನ್ನ, ಅಮೆರಿಕದ ವಿಶೇಷ ಸೇನಾ ಪಡೆ ಹೊಡೆದುರುಳಿಸಿದೆ. ವಿಶ್ವವನ್ನ ಕಾಡಿದ ಐಸಿಸಿ ಉಗ್ರ ಸಂಘಟನೆ ರೂವಾರಿಯ ಹತ್ಯೆ ವಿಶ್ವಕ್ಕೆ ಖುಷಿ ನೀಡಿದೆ. ಜಗತ್ತಿನ ತುಂಬ ರಕ್ತದ ಓಕುಳಿ ಆಡಿದ ರಕ್ತ ಬೀಜಾಸುರನ ಅಂತ್ಯಕ್ಕೆ ಕಾರಣವಾಗಿದ್ದು ಒಂದು ವಿಶೇಷ ಶ್ವಾನ.

ಉಗ್ರ ಬಗ್ದಾದಿ ಹತ್ಯೆ ಬಗ್ಗೆ ಟ್ವೀಟರ್ ಮೂಲಕ ಅಧಿಕೃತ ಪಡಿಸಿದ್ದ ಅಮೆರಿಕ ಅಧ್ಯಕ್ಷ ಡೂನಾಲ್ಡ್ ಟ್ರಂಪ್, ವಿಶೇಷ ನಾಯಿಯ ಫೋಟೋವನ್ನ ಶೇರ್ ಮಾಡಿದ್ದಾರೆ. ಅತ್ಯುತ್ತಮವಾದ ನಾಯಿಯ ಚಿತ್ರವನ್ನ ನಾವು ಬಿಡುಗಡೆ ಮಾಡ್ತಿದ್ದೇವೆ ಅಂತಾ ಟ್ವೀಟ್ ಮಾಡಿದ್ದಾರೆ. ಆದ್ರೆ, ರಕ್ಷಣೆಯ ದೃಷ್ಟಿಯಿಂದ ಈ ನಾಯಿಯ ಹೆಸರು ಮಾತ್ರ ಅನೌನ್ಸ್ ಮಾಡುವುದಿಲ್ಲವೆಂದು ಹೇಳಿದ್ದಾರೆ.

ಆಪರೇಷನ್ ಕಯ್ಲಾ ಮುಲ್ಲರ್:

ಅಮೆರಿಕದ ವಿಶೇಷ ಸೇನಾ ಪಡೆ 8 ಹೆಲಿಕಾಪ್ಟರ್ ಮೂಲಕ ಶ್ವಾನದಳದೊಂದಿಗೆ ಉಗ್ರ ಬಗ್ದಾದಿ ಅಡಗಿದ್ದ ತಾಣದತ್ತ ಹೊರಟಿತು. ಇದ್ಲಬ್ ಪ್ರಾಂತ್ಯದ ಅಜ್ಞಾತ ಸ್ಥಳದಲ್ಲಿ ಬಗ್ದಾದಿ ಅಡಗಿಕೊಂಡಿದ್ದ. ಡೆಲ್ಟಾ ಹೆಲಿಕಾಪ್ಟರ್ ನ ಸೌಂಡ್ ಕೇಳಿಸ್ತಿದ್ದಂತೆ ಉಗ್ರರು ಗುಂಡು ಹಾರಿಸಲು ಶುರು ಮಾಡಿದ್ರು. ಇದಕ್ಕೆ ಅಮೆರಿಕ ಯೋಧರು ಪ್ರತ್ಯುತ್ತರ ನೀಡಿ ಕೆಳಗೆ ಇಳಿದರು.

ಭೂಗತ ಪ್ರಪಂಚದ ಗೋಡೆಗಳನ್ನ ಛಿದ್ರಗೊಳಿಸಿದ ಯೋಧರು, ಎದುರಿಗೆ ಬಂದ ಉಗ್ರರ ಮೇಲೆ ಗುಂಡು ಹಾರಿಸಿದ್ರು. ಆಗ ಐಸಿಸ್ ನ ಪ್ರಮುಖ ಬಗ್ದಾದಿ ಸುರಂಗ ಮಾರ್ಗದ ಮೂಲಕ ತಪ್ಪಿಸಿಕೊಳ್ಳಲು ಹೋದ. ತಕ್ಷಣ ಅವನನ್ನ ಬೆನ್ನು ಹತ್ತಿದ್ದೆ ಈ ಶ್ವಾನ. ಇದ್ರಿಂದ ದಾರಿ ಕಾಣದಾದ ಉಗ್ರ ತಾನು ಧರಿಸಿದ್ದ ಬಾಂಬ್ ಗಳಿದ್ದ ವೇಸ್ಟ್ ಕೋಟ್ ಸ್ಫೋಟಿಸಿಕೊಂಡು ಸಾಯ್ತಾನೆ. ಜೊತೆಗೆ ತನ್ನ ಮೂರು ಮಕ್ಕಳನ್ನ ಸೇರಿಸಿಕೊಂಡು ಹತನಾಗ್ತಾನೆ. ಅಲ್ಲಿಗೆ ನಂಬರ್ ಒನ್ ಉಗ್ರನ ಅಂತ್ಯವಾಗುತ್ತೆ.

ನಂಬರ್ ಒನ್ ಉಗ್ರ ಅಬುಬುಕರ್ ಅಲ್ ಬಗ್ದಾದಿ

ಅಮೆರಿಕ ವಿಶೇಷ ಸೇನಾ ಪಡೆಯಲ್ಲಿರುವ ಈ ಸ್ಪೆಷಲ್ ಡಾಗ್, ತನ್ನ ಚಾಣಾಕ್ಷತನದಿಂದ ಉಗ್ರನನ್ನ ಬೆನ್ನು ಹತ್ತಿದ ಪರಿಣಾಮ, ವಿಶ್ವಕ್ಕೆ ದೊಡ್ಡ ತಲೆನೋವಾಗಿದ್ದವನ ಸಂಹಾರವಾಯ್ತು. ಈ ಒಂದು ಕಾರ್ಯಾಚರಣೆಯಲ್ಲಿ ಶ್ವಾನಕ್ಕೆ ಒಂದಿಷ್ಟು ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯವಾಗಿದೆ. ಈ ಸ್ಪೆಷಲ್ ಡಾಗ್ ಗೆ ಸಲಾಂ.




Leave a Reply

Your email address will not be published. Required fields are marked *

error: Content is protected !!