RISAT-2B ಉಡಾವಣೆ ಸಕ್ಸಸ್

369

ಆಂಧ್ರಪ್ರದೇಶ: ಇಸ್ರೋ ಇದೀಗ ಮತ್ತೊಂದು ಇತಿಹಾಸವನ್ನ ಸೃಷ್ಟಿ ಮಾಡಿದೆ. RISAT-2B ಅನ್ನೋ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ದೇಶದ ರಕ್ಷಣೆಯಲ್ಲಿ ಇದರ ಪಾತ್ರ ಪ್ರಮುಖವಾಗಿದೆ. ಈ ಮೂಲಕ ಭಾರತೀಯ ಸಂಶೋಧನಾ ಸಂಸ್ಥೆ ಹೊಸ ಮೈಲುಗಲ್ಲು ಮುಟ್ಟಿದೆ.

ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಕ್ಯಾಕಾಶ ಕೇಂದ್ರದಿಂದ ಇಂದು ಬೆಳಗ್ಗೆ 5.30ರ ಸುಮಾರಿಗೆ ಉಡಾವಣೆ ಮಾಡಲಾಗಿದ್ದು, ಇದು ಯಶಸ್ವಿಯಾಗಿದೆ ಅಂತಾ ತಿಳಿದು ಬಂದಿದೆ. ಇದು 48ನೇ ಮಿಷನ್ ಆಗಿದ್ದು, 615 ಕೆಜಿಯ ಉಪಗ್ರಹವನ್ನು ಹೊತ್ತುಕೊಂಡು ಹೋಗಿದೆ.

ರೇಡಾರ್ ಇಮೇಜಿಂಗ್ ಸ್ಯಾಟಲೈಟ್-2ಬಿಯನ್ನು ಸುಮಾರು 15 ನಿಮಿಷಗಳ ಕಾಲ ಕಕ್ಷೆಗೆ ಬಿಡಲಾಯ್ತು. ಇದು, ಅರಣ್ಯ, ವಿಪತ್ತು ನಿರ್ವಹಣೆ ಸಂದರ್ಭಗಳಲ್ಲಿ ಕಣ್ಗಾವಲಾಗಿ ಕೆಲಸ ಮಾಡುತ್ತೆ.


TAG


Leave a Reply

Your email address will not be published. Required fields are marked *

error: Content is protected !!