ದೇವರ ನಾಡಲ್ಲಿ ರಾಮಾಯಣದ ‘ಜಟಾಯು’ ಪಾರ್ಕ್

941

ಕೇರಳದಲ್ಲೊಂದು ಅದ್ಭುತ ಪಾರ್ಕ್ ಇದೆ. ಇದು ವಿಶ್ವದಲ್ಲಿಯೇ ವಿಶೇಷವಾದ ಪಾರ್ಕ್ ಎನಿಸಿಕೊಂಡಿದೆ. ಕಾರಣ, ಇಲ್ಲಿರುವ ಬೃಹತ್ ಜಟಾಯು ಮೂರ್ತಿ. ಇದು ರಾಮಾಯಣದಲ್ಲಿ ಬರುವ ಜಟಾಯುವಿನ ಕಥೆ ಹೇಳುತ್ತೆ. ಮಹಾಗ್ರಂಥದ ಕಥೆಯನ್ನ ಹೇಳುವ ಪಾರ್ಕ್ ಹೆಸರು ಜಟಾಯು ನೇಚರ್ ಪಾರ್ಕ್.

ಪೌರಾಣಿಕ ಹಾಗೂ ಐತಿಹಾಸಿಕ ಕಥೆಯನ್ನ ಹೇಳುವ ಮೂಲಕ ಟೂರಿಸ್ಟ್ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡುವ ನಿಟ್ಟಿನಲ್ಲಿ ಬೆಟ್ಟದ ತುದಿಯಲ್ಲಿ ಇದನ್ನ ನಿರ್ಮಿಸಲಾಗಿದೆ. ಕೇರಳದ ಕೊಲ್ಲಂ ಜಿಲ್ಲೆಯ ಚಂದ್ಯಾಮಂಗಲಂ ಅನ್ನೋ ಊರಿನಲ್ಲಿರುವ ಬೆಟ್ಟದ ಮೇಲೆ ಬೃಹತ್ ಜಟಾಯು ಪಾರ್ಕ್ ನಿರ್ಮಾಣ ಮಾಡಲಾಗಿದೆ. ಇದನ್ನ ನೋಡಲು ಎರಡು ಕಣ್ಣುಗಳು ಸಾಲದು ಅಷ್ಟೊಂದು ಸುಂದರವಾಗಿದೆ.

ಬರೋಬ್ಬರಿ 65 ಎಕರೆ ಜಾಗದಲ್ಲಿ ಜಟಾಯು ಪಾರ್ಕ್ ನಿರ್ಮಾಣ ಮಾಡಲಾಗಿದೆ. 200 ಅಡಿ ಉದ್ದ, 150 ಅಡಿ ವಿಶಾಲ ಹಾಗೂ 70 ಅಡಿ ಎತ್ತರದ ಜಟಾಯು ಮೂರ್ತಿಯನ್ನ ನಿರ್ಮಿಸಲಾಗಿದೆ. 2016ರಲ್ಲಿ ಈ ಪಾರ್ಕ್ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಇದರ ನಿರ್ಮಾಣದ ಹಿಂದೆ ಇರೋದು ಕೇರಳ ಪ್ರವಾಸೋದ್ಯಮ ಇಲಾಖೆ ಹಾಗೂ ಮಲಿಯಾಳಂ ಮೂವಿ ಮೇಕರ್ ರಾಜೀವ ಅಂಚಹಾಳ್.

ಕಲಾವಿದ ರಾಜೀವ ಹಂಚಹಾಳ್

ಇಲ್ಲಿ ಸುಮಾರು 20 ಬಗೆಯ ಗೇಮ್ ಗಳಿವೆ. ಅಡ್ವೆಂಚರ್ ಪಾರ್ಕ್ ಇದೆ. 6ಡಿ ಥಿಯೇಟರ್ ಇದೆ. ಬೆಟ್ಟದ ತುದಿಗೆ ಹೋಗಲು ಕೇಬಲ್ ಕಾರ್ ಸಹ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಯ ಪ್ರಮುಖ ಆಕರ್ಷಣೆಯ ಸ್ಥಳ ಜಟಾಯು ಮೂರ್ತಿ. ಇದು ವಿಶ್ವದ ಅತೀ ದೊಡ್ಡ ಪಕ್ಷಿ ಕೆತ್ತನೆಯಾಗಿದೆ. ಒಂದು ರೆಕ್ಕೆ ಹಾಗೂ ಕಾಲು ಮುರಿದಂತೆ, ಮೇಲ್ಮುಖ ಮಾಡಿ ಬಿದ್ದಿರುವ ಜಟಾಯು ಕೆತ್ತನೆ ಸುಂದರವಾಗಿದೆ.

ಸೀತೆಯನ್ನ ರಾವಣ ಅಪಹರಿಸಿಕೊಂಡು ಹೋಗ್ತಿದ್ದ ಸಂದರ್ಭದಲ್ಲಿ ವಯಸ್ಸಾದ ಜಟಾಯು ಕಾಪಾಡಲು ಬರುತ್ತೆ. ರಾವಣನಿಗೆ ಅಡ್ಡವಾಗಿ ನಿಂತುಕೊಳ್ಳುತ್ತೆ. ತನ್ನ ರೆಕ್ಕೆಗಳಿಂದ ಅವನಿಗೆ ಹೊಡೆಯುತ್ತೆ. ಜಟಾಯು ಕಾಟ ತಳಲಾಗಿದೆ ಹತ್ತುತಲೆ ರಾವಣ ಅದರ ರೆಕ್ಕೆಗಳನ್ನ ಕತ್ತರಿಸಿ ಹಾಕುತ್ತಾನೆ. ಆಗ ಅದು ಕೆಳಗೆ ಬಿದ್ದು ನರಳಾಡುತ್ತೆ. ರಾಮನಿಗೆ ಸಂದೇಶ ನೀಡುತ್ತೆ. ಆ ಕಥೆಯನ್ನ ಹೇಳುವ ಶೈಲಿಯಲ್ಲಿ ಇದನ್ನ ನಿರ್ಮಿಸಲಾಗಿದೆ. ಬೆಟ್ಟದ ಮೇಲೆ ವಿಶಾಲವಾದ ಜಾಗದಲ್ಲಿ ಇರೋದ್ರಿಂದ ಇದನ್ನ ನೋಡಲು ಅಪಾರ ಪ್ರಮಾಣದಲ್ಲಿ ಪ್ರವಾಸಿಗರು ಬರ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!