ರಕ್ತ ಚರಿತ್ರೆ ಹೇಳಲು ಕಾಟೇರ ಸಿದ್ಧ

167

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಚಿತ್ರದ ಟ್ರೇಲರ್ ಶನಿವಾರ ಸಂಜೆ ಹುಬ್ಬಳ್ಳಿಯಲ್ಲಿ ರಿಲೀಸ್ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಚಿತ್ರತಂಡ ಈ ವೇಳೆ ಭಾಗವಹಿಸಿತ್ತು. ಅಭಿಮಾನಿಗಳ ಸಮ್ಮುಖದಲ್ಲಿ ಟ್ರೇಲರ್ ರಿಲೀಸ್ ಆಗಿದೆ.

ದರ್ಶನ್ ಅಭಿಮಾನಿಗಳು ಸೇರಿದಂತೆ ಎಲ್ಲರಿಗೂ ಟ್ರೇಲರ್ ಇಷ್ಟವಾಗಿದೆ. ಕರ್ನಾಟಕ ಫಿಲ್ಮ್ ಇಂಡ್ ಸ್ಟರಿಯಿಂದ ಮತ್ತೊಂದು ಭರ್ಜರಿ ಮೂವಿ ಬರುತ್ತಿದೆ. ಹಳ್ಳಿ ಸೊಗಡಿನ ಕಥೆಯಲ್ಲಿ ರಕ್ತ ಚರಿತ್ರೆ ಅಡಗಿದೆ. ಬಹುದೊಡ್ಡ ತಾರಾಬಳಗದ ಕಾಟೇರ ಸಾಕಷ್ಟು ಕ್ರೇಜ್ ಕ್ರಿಯೇಟ್ ಮಾಡಿದೆ.

ರಾಬರ್ಟ್ ಬಳಿಕ ತರುಣ್ ಸುಧೀರ್ ನಿರ್ದೇಶನದಲ್ಲಿ ಡಿ ಬಾಸ್ ಕಾಣಿಸಿಕೊಂಡಿದ್ದಾರೆ. ನಟಿ ಮಾಲಶ್ರೀ ಅವರ ಮಗಳು ಆರಾಧನಾ ಬಿಗ್ ಸ್ಟಾರ್ ಅಂಡ್ ಬಿಗ್ ಬ್ಯಾನರ್ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಜಗಪತಿ ಬಾಬು, ಕುಮಾರ್ ಗೋವಿಂದ್, ಶ್ರುತಿ, ವೈಜನಾಥ ಬಿರಾದಾರ ಸೇರಿ ಅನೇಕ ಹಿರಿಯ ಕಲಾವಿದರಿದ್ದಾರೆ. ವಿ.ಹರಿಕೃಷ್ಣ ಮ್ಯೂಸಿಕ್ ಈಗಾಗ್ಲೇ ಮೋಡಿ ಮಾಡಿದೆ. ಮಾಸ್ತಿ ಡೈಲಗ್ ಅಬ್ಬರಿಸುತ್ತಿದೆ. ಕಥೆ, ಚಿತ್ರಕಥೆ ತರುಣ್ ಸುಧೀರ್, ಜಡೇಶ್ ಹಂಪಿ ಬರೆದಿದ್ದಾರೆ. ರಾಕ್ ಲೈನ್ ಎಂಟರ್ ಟೈನ್ಮೆಂಟ್ ಮೂಲಕ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕಾಟೇರ ಸಿನಿಮಾ ನಿರ್ಮಾಣ ಮಾಡಿದ್ದು, ಡಿಸೆಂಬರ್ 29 ಥಿಯೇಟರ್ ಗೆ ಲಗ್ಗೆ ಇಡುತ್ತಿದೆ.




Leave a Reply

Your email address will not be published. Required fields are marked *

error: Content is protected !!