ಸಿಲಿಂಡರ್ ಸ್ಫೋಟ: ಮಗು ಸೇರಿ 7 ಮಂದಿಗೆ ಗಾಯ

211

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಮನೆಯಲ್ಲಿನ ಸಿಲಿಂಡರ್ ಸ್ಫೋಟಗೊಂಡ ಮಗು ಸೇರಿ 7 ಜನರು ಗಾಯಗೊಂಡ ಘಟನೆ ಗೋಕಾಕ ತಾಲೂಕಿನ ಅಕ್ಕತಂಗೇರಹಾಳ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಅಶೋಕ್ ನಿರ್ವಾಣಿ, ರಾಜಶ್ರೀ ನಿರ್ವಾಣಿ, ದೀಪಾ ನಿರ್ವಾಣಿ, ಸೋಮನಗೌಡ ನಿರ್ವಾಣಿ, ಮಕ್ಕಳಾದ ನವೀನ್, ವಿದ್ಯಾ ಹಾಗೂ 9 ತಿಂಗಳ ಮಗು ಬಸನಗೌಡ ಗಾಯಗೊಂಡಿದ್ದಾರೆ. ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾತ್ರಿ ಮಲಗಿದ್ದ ವೇಳೆ ಗ್ಯಾಸ್ ಸೋರಿಕೆಯ ವಾಸನೆ ಬಂದಿದೆ. ಮೊಬೈಲ್ ಟಾರ್ಚ್ ಹಿಡಿದು ನೋಡಲು ಹೋದಾಗ ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!