ಮನದಾಳದ ಮಾತು

1623

ಹೆಣ್ಣಿನ ಅಂತರಾಳದ ಭಾವನೆ ಏನಾಗಿರುತ್ತೆ. ಅವಳ ಮನಸ್ಸು ಯಾವುದರತ್ತ ತುಡಿಯುತ್ತೆ. ಆಕೆಯ ಕಲ್ಪನೆಯ, ಆಕೆ ಜೀವಿಸಲು ಬಯಸುವ ಬಯಲು ಎಂತದ್ದು ಅನ್ನೋದು ಲತಾಪ್ರಸಾದ್ ಅವರ ಈ ಕವಿತೆಯಲ್ಲಿದೆ..

ನನಗೂ ಒಂದು ಮನಸಿದೆ

ಮನಸಿನ ತುಂಬಾ ಕನಸಿದೆ

ನಾನಲ್ಲ ಸೃಷ್ಟಿಯ ಕುಹಕ 

ನಿಮ್ಮ ನೋಟದಲ್ಲೇಕೆ ಮರುಕ?

ನನಗೂ ಇದೆ ಒನಪು ವಯ್ಯಾರಗಳ ಹಂಬಲ

ಮದುವೆ ಸಮಾರಂಭಗಳ ಚಪಲ

ತೊಡಿಸುವಿರಿ ನನಗೆ ಗೃಹಬಂಧನದ ಚೈನು

ಕರೆದೊಯ್ದರೆ ಅದೋ ಷರತ್ತುಬದ್ಧ ಜಾಮೀನು

ಮನಸ್ಸಿನಿಂದ ನಾನು ಸವಿಯಾದ ಜೇನು 

ಮಾಡುವಿರೇಕೆ ನನ್ನನ್ನು ನೀರಿನಾಚೆಯಾ ಮೀನು 

ಅವಕಾಶ ಕೊಟ್ಟು ನೋಡಿ ನಾನೂ ಸಫಲ 

ನನ್ನ ಬೇಡಿಕೆಗಳು ಬಹಳ ಕೇವಲ

ಬೇಕು ನನಗೂ ಒಂದು ಶಾಲೆ 

ನನ್ನ ಕಲೆಗೂ ನೆಲೆ ಬೆಲೆ 

ನನ್ನಲ್ಲೂ ಇದೆ ಪ್ರೀತಿಯ ಸೆಲೆ

ಸೇರಿಸಿಕೊoಡು ನೋಡಿ ನಾನೊಂದು ಹೂಮಾಲೆ

ಬೇಡುವುದಿಲ್ಲ ನಾನು ಸನ್ಮಾನ 

ನನಗೂ ಇದೆ ಒಂದು ಸ್ಥಾನಮಾನ

ಅರಿವಿಲ್ಲದಂತೆ ಇದೆ ನನಗೆ ಸಾಮರ್ಥ್ಯ 

ನನ್ನ ಕಲೆಗೆ ಅವಕಾಶವಿರದಿರೆ ಜೀವನ ವ್ಯರ್ಥ

ಸ್ವೀಕಾರ, ಸಂಬಂಧ, ಸೈರಣೆ, ಸಾಮರ್ಥ್ಯ, ಸನ್ಮಾನ ನನ್ನ ಬಾಳಿನ ಜೀವಾಳ 

ಅದಕೆ ನೀವಾಗಿ ನನ್ನ ಅಂತರಾಳ

ಲತಾಪ್ರಸಾದ್, ಹವ್ಯಾಸಿ ರಂಗಕರ್ಮಿ, ಬೆಂಗಳೂರು



Leave a Reply

Your email address will not be published. Required fields are marked *

error: Content is protected !!