ಕಲಬುರಗಿಯಲ್ಲಿ 2 ದಿನದಲ್ಲಿ 1,600 ವಾಹನಗಳು ಸೀಜ್

488

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಾವು, ನೋವು ತುಂಬಾ ಹೆಚ್ಚಾಗ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಲಾಕ್ ಡೌನ್ ಜಾರಿ ಮಾಡಿದೆ. ಬೆಳಗ್ಗೆ 6 ರಿಂದ 10 ಗಂಟೆ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಟ್ಟಿದೆ. 10 ಗಂಟೆಯ ನಂತರ ಓಡಾಡುವ ವಾಹನಗಳನ್ನ ಸೀಜ್ ಮಾಡಲಾಗ್ತಿದೆ. ಅದೆ ರೀತಿ ಕಲಬುರಗಿಯಲ್ಲಿ 2 ದಿನದಲ್ಲಿ ಸಾವಿರಾರು ಗಾಡಿಗಳನ್ನ ಸೀಜ್ ಮಾಡಲಾಗಿದೆ.

ಅನಗತ್ಯವಾಗಿ ಓಡಾಡುವ ಗಾಡಿಗಳನ್ನ ಜಿಲ್ಲಾ ಪೊಲೀಸರು ಸೀಜ್ ಮಾಡಿದ್ದಾರೆ. 1,200 ಬೈಕ್ ಗಳು, ಕಾರು, ಟಂಟಂ, ಆಟೋ ಸೇರಿದಂತೆ 1,600 ವಾಹನಗಳನ್ನ ಸೀಜ್ ಮಾಡಿ ನಗರದ ಡಿಎಆರ್ ಪೊಲೀಸ್ ಗ್ರೌಂಡ್ ನಲ್ಲಿ ನಿಲ್ಲಿಸಲಾಗಿದೆ. ಈ ಮೂಲಕ ಪೊಲೀಸರು ನಗರದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನ ತೆಗೆದುಕೊಳ್ತಿದ್ದಾರೆ.

ಕಲಬುರಗಿಯಲ್ಲಿ ಮಂಗಳವಾರ 971 ಪ್ರಕರಣಗಳು ದಾಖಲಾಗಿವೆ. 5 ಜನರು ಸಾವನ್ನಪ್ಪಿದ್ದಾರೆ. ಇದುವರೆಗೂ 52,444 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 567 ಜನರು ಸಾವನ್ನಪ್ಪಿದ್ದಾರೆ.




Leave a Reply

Your email address will not be published. Required fields are marked *

error: Content is protected !!