ಪ್ರಜಾಸ್ತ್ರ ಸಿನಿಮಾ ಡೆಸ್ಕ್
ನಟ ಸತೀಶ್ ನೀನಾಸಂ ನಟನೆಯ ಮ್ಯಾಟ್ನಿ ಚಿತ್ರದ ಹಾಡೊಂದು ಹೊಸ ವರ್ಷಕ್ಕೆ ರಿಲೀಸ್ ಮಾಡಲಾಗಿದೆ. ಬಾರೋ ಬಾರೋ ಬಾಟಲ್ ತಾರೋ ಎನ್ನುವ ಹಾಡನ್ನು ಬಿಡುಗಡೆ ಮಾಡಲಾಗಿದೆ. ಸಾಹಿತ್ಯ ಮತ್ತು ಸಂಗೀತ ಪೂರ್ಣಚಂದ್ರ ತೇಜಸ್ವಿ ಎಸ್.ವಿ ಕೊಟ್ಟಿದ್ದಾರೆ.
ರ್ಯಾಪ್ ಶೈಲಿಯಲ್ಲಿರುವ ಹಾಡು ಪಾರ್ಟಿ ಪ್ರಿಯರಿಗೆ ಅಚ್ಚುಮೆಚ್ಚಾಗಿದೆ. ಈ ಹಾಡಿನಲ್ಲಿ ನಟರಾದ ನಾಗಭೂಷಣ್, ಸುನಿಲ್ ಮೈಸೂರು, ಶಿವರಾಜ್ ಕೆ.ಆರ್ ಪೇಟೆ ಕಾಣಿಸಿಕೊಂಡಿದ್ದಾರೆ. ಸತೀಶ್ ನೀನಾಸಂಗೆ ಜೋಡಿಯಾಗಿ ನಟಿಯರಾದ ರಚಿತಾ ರಾಮ್, ಅಧಿತಿ ಪ್ರಭುದೇವ್ ಕಾಣಿಸಿಕೊಂಡಿದ್ದಾರೆ.
ಡಾಲಿ ಧನಂಜಯ್ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಮನೋಹರ್ ಕಾಂಪಳ್ಳಿ ಆಕ್ಷನ್ ಕಟ್ ಹೇಳಿದ್ದಾರೆ. ಎಫ್3 ಪ್ರೊಡಕ್ಷನ್ ಅಡಿಯಲ್ಲಿ ಪಾರ್ವತಿ ಎಸ್.ಗೌಡ ಎಂಬುವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.