ಅಂತಾರಾಷ್ಟ್ರೀಯ ಅಂಗಳಕ್ಕೆ ವಿದಾಯ.. ಧೋನಿ ದಾಖಲೆಯ ಹಾದಿ..

329

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಧೋನಿ ಅಂದ್ರೆ ಸ್ಟೈಲ್.. ಧೋನಿ ಅಂದ್ರೆ ಮಿಸ್ಟರ್ ಕೂಲ್.. ಧೋನಿ ಅಂದ್ರೆ ಹೆಲಿಕಾಪ್ಟರ್ ಶಾಟ್.. ಧೋನಿ ಅಂದ್ರೆ ಅಭಿಮಾನಿಗಳ ಡಾರ್ಲಿಂಗ್.. ಇಂಥಾ ಆಟಗಾರ ಇಂದು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಆಟಕ್ಕೆ ಗುಡ್ ಬೈ ಹೇಳಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಕೊಟ್ಟ ಶಾಕ್ ಅಭಿಮಾನಿಗಳಿಗೆ ತೀವ್ರ ಬೇಸರವಾಗಿದೆ. ಕೋಟ್ಯಾಂತರ ಕ್ರಿಕೆಟ್ ಪ್ರೇಮಿಗಳ ಆಲ್ ಟೈಂ ಫೇವರೆಟ್ ಧೋನಿಯ ಹಾದಿ ಇಲ್ಲಿದೆ..

ಅಂತಾರಾಷ್ಟ್ರೀಯ ಅಂಗಳದಲ್ಲಿ..

2004, ಡಿಸೆಂಬರ್ 23ರಂದು ಬಾಂಗ್ಲಾದೇಶ ಜೊತೆ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಎಂಟ್ರಿ. 2005, ಡಿಸೆಂಬರ್ 2ರಂದು ಶ್ರೀಲಂಕಾ ಜೊತೆಗಿನ ಟೆಸ್ಟ್ ಪಂದ್ಯ ಆಡುವುದರೊಂದಿಗೆ ಎರಡು ಮಾದರಿಯ ಕ್ರಿಕೆಟ್ ಜರ್ನಿ ಶುರು ಮಾಡ್ತಾರೆ. ಮೊದಲ ಏಕದಿನ ಪಂದ್ಯದಲ್ಲಿಯೇ ಡಕೌಟ್ ಆಗ್ತಾರೆ. ಮುಂದೆ ಶೈನ್ ಆಗಿದ್ದು ಪಾಕ್ ಟೂರ್ನಿಯಲ್ಲಿ. ಇನ್ನು ಟಿ-20 ಎಂಟ್ರಿಯಾಗಿದ್ದು ಡಿಸೆಂಬರ್ 1, 2006 ಸೌಥ್ ಆಫ್ರಿಕಾ ವಿರುದ್ಧ.

ಧೋನಿ ಮ್ಯಾಚ್ ಆ್ಯಂಡ್ ರನ್ಸ್..

350 ಏಕದಿನ ಪಂದ್ಯಗಳಲ್ಲಿ 10,773 ರನ್ ಗಳನ್ನ ಬಾರಿಸಿದ್ದಾರೆ. ಇದರಲ್ಲಿ 183 ಅಧಿಕ ಸ್ಕೋರ್ ಆಗಿದೆ. 10 ಶತಕ ಹಾಗೂ 73 ಅರ್ಧ ಶತಕ ಬಾರಿಸಿದ್ದಾರೆ. ಸರಸಾರಿ 50.53 ಸ್ಟ್ರೈಕ್ ರೇಟ್ ಇದೆ. ಇನ್ನು 90 ಟೆಸ್ಟ್ ಪಂದ್ಯಗಳನ್ನ ಆಡಿದ್ದು 4,876 ರನ್ ಗಳನ್ನ ಬಾರಿಸಿದ್ದಾರೆ. ಇದರಲ್ಲಿ 6 ಶತಕ, 33 ಅರ್ಧ ಶತಕ ದಾಖಲಾಗಿವೆ. ಸರಾಸರಿ 38.09 ಸ್ಟ್ರೇಕ್ ರೇಟ್ ಇದೆ. ಇದೆ ರೀತಿ 98 ಟಿ-20 ಆಡಿದ್ದು 1,617 ರನ್ ಬಾರಿಸಿದ್ದು, 2 ಅರ್ಧ ಶತಕ ದಾಖಲು. 37.60 ಸರಾಸರಿಯಿದೆ.

ಡಿಸೆಂಬರ್ 26, 2014 ಕೊನೆಯ ಟೆಸ್ಟ್ ಪಂದ್ಯ ಆಸ್ಟ್ರೇಲಿಯಾ ಜೊತೆ ಆಡಿದ್ದು. 2019, ಜುಲೈ 9ರಂದು ನ್ಯೂಜಿಲೆಂಡ್ ಜೊತೆ ಕೊನೆಯ ಏಕದಿನ ಪಂದ್ಯ ಆಡಿದ್ದು. ಪೆಬ್ರವರಿ 27, 2019 ಆಸ್ಟ್ರೇಲಿಯಾ ಜೊತೆ ಕೊನೆಯ ಟಿ-20 ಪಂದ್ಯ ಆಡಿರುವುದು. 2015ರಲ್ಲಿ ಟೆಸ್ಟ್ ಮಾದರಿಯ ಕ್ರಿಕೆಟ್ ಗೆ ವಿದಾಯ. ಇದೀಗ ಆಗಸ್ಟ್ 15, 2020 ಏಕದಿನ ಹಾಗೂ ಟಿ-20 ಮಾದರಿಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ.

ನಾಯಕನಾಗಿ ಎಂಎಸ್ಡಿ..

ಮಿಸ್ಟರ್ ಕೂಲ್ ಕ್ಯಾಪ್ಟನ್ ಎಂದು ಹೆಸರು ಮಾಡಿದ ಧೋನಿ, ಈ ಹಿಂದಿನ ಯಾವ ನಾಯಕರಗಳು ಮಾಡದ ಸಾಧನೆ ಮಾಡಿದ್ದಾರೆ. ಐಸಿಸಿ ಆಯೋಜನೆಯ ಎಲ್ಲ ಟ್ರೋಫಿಗಳನ್ನ ಜಯಸಿದ ಮೊದಲ ನಾಯಕರಾಗಿದ್ದಾರೆ. 2007ರಲ್ಲಿ ಫಸ್ಟ್ ಟಿ-20 ವರ್ಲ್ಡ್ ಕಪ್, 2010 ಹಾಗೂ 2016ರಲ್ಲಿ ಏಷ್ಯಾ ಕಪ್, 2011ರಲ್ಲಿ 28 ವರ್ಷಗಳ ಬಳಿಕ ವರ್ಲ್ಡ್ ಕಪ್, 2013 ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಮೂಲಕ 2008-2014ರವರೆಗಿನ ನಾಯಕತ್ವದಲ್ಲಿ ಧೋನಿ ಎಲ್ಲದರಲ್ಲೂ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ.

ವಿಕೆಟ್ ಕೀಪರ್ ರಾಂಚಿ ಬಾಯ್..

ವಿಕೆಟ್ ಕೀಪರ್ ಆಗಿದ್ದ ಧೋನಿ ಅತ್ಯಂತ ವೇಗವಾಗಿ ಸ್ಟಂಪಿಂಗ್ ಮಾಡ್ತಿದ್ರು. ಕ್ಯಾಚ್ ಹಾಗೂ ಸ್ಟಂಪಿಂಗ್ ನಲ್ಲಿ ನೋಡುವುದಾದ್ರೆ ಟೆಸ್ಟ್ ನಲ್ಲಿ 256 ಕ್ಯಾಚ್, 36 ಸ್ಟಂಪಿಂಗ್ ಮಾಡಿದ್ದಾರೆ. ಒನ್ ಡೇನಲ್ಲಿ 321 ಕ್ಯಾಚ್, 123 ಸ್ಟಂಪಿಂಗ್ ಹಾಗೂ ಟಿ-20ನಲ್ಲಿ 57 ಕ್ಯಾಚ್, 34 ಸ್ಟಂಪಿಂಗ್ ಮಾಡಿದ್ದಾರೆ.

ಐಪಿಎಲ್ ದುನಿಯಾ..

2010ರಲ್ಲಿ ಶುರುವಾದ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾದ್ರು. 2010, 2011, 2018ರಲ್ಲಿ ಚಾಂಪಿಯನ್ಸ್ ಪಟ್ಟ. ಮುಂದೆ 2 ವರ್ಷ ಸಿಎಸ್ ಕೆ ಬ್ಯಾನ್ ಆದ್ಮೇಲೆ ಪುಣೆ ರೈಸಿಂಗ್ ಸೂಪರ್ ಜಯಂಟ್ಸ್ ನಲ್ಲಿ ಆಡಿದ್ರು. ಆಗ ಪುಣೆ ಟೀಂ ಮುಂಬೈ ವಿರುದ್ಧ ಫೈನಲ್ ನಲ್ಲಿ ಸೋಲು ಅನುಭವಿಸಿತು.

ಇನ್ನು 2010, 2014ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡರು. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡ್ತಿದ್ದು, 2020ರ ಐಪಿಎಲ್ ಟಿ-20 ಶುರುವಾಗಬೇಕಿದೆ. ತೆಲೆ ತುಂಬಾ ಕೂದಲು ಬಿಟ್ಟುಕೊಂಡು ಅಂಗಳಕ್ಕೆ ಎಂಟ್ರಿ ಕೊಟ್ಟ ಬಲಗೈ ಆಟಗಾರ ತನ್ನ ವಿಭಿನ್ನ ಸ್ಟೈಲ್, ಸ್ಫೋಟಕ ಬ್ಯಾಟಿಂಗ್, ಕೂಲ್ ನಡುವಳಿಕೆಯಿಂದ ಕ್ರಿಕೆಟ್ ದುನಿಯಾ ಆಳಿದ. 39 ವರ್ಷದ ಧೋನಿ ಇದೀಗ ಅಂತಾರಾಷ್ಟ್ರೀಯ ಅಂಗಳಕ್ಕೆ ವಿದಾಯ ಹೇಳಿದ್ದಾರೆ.

ವೈಯಕ್ತಿಯ ಬದುಕು..

ಜುಲೈ 4, 2010ರಂದು ಸಾಕ್ಷಿ ಜೊತೆ ಹುಟ್ಟೂರು ಡೆಹ್ರಾಡೋನ್ ನಲ್ಲಿ ಮದುವೆಯಾದ್ರು. ಫೆಬ್ರವರಿ 6, 2015ರಲ್ಲಿ ಹೆಣ್ಣು ಮಗುವಿನ ತಂದೆಯಾದ್ರು. ಧೋನಿ-ಸಾಕ್ಷಿಯ ಜೀವಾ ಆಕೆ. ಸಾಕ್ಷಿ ಮದುವೆಗೂ ಮೊದ್ಲು ಬಾಲಿವುಡ್ ನಟಿ ಬಿಪಾಶಾ ಬಸು ಜೊತೆಗೆ ಗುಸುಗುಸು ಕೇಳಿ ಬಂದಿತ್ತು.

ಕೃಪೆ: ಇಎಸ್ಪಿಎನ್ ಕ್ರಿಕ್ ಇನ್ಪೋ




Leave a Reply

Your email address will not be published. Required fields are marked *

error: Content is protected !!