ವಿಜಯಪುರ: ನಗರದ ಶಾಸಿನಗರದಲ್ಲಿ ಸುಮಾರು 69 ವರ್ಷದ ವೃದ್ಧೆಯನ್ನ ಭಾನುವಾರ ತಡರಾತ್ರಿ ಹತ್ಯೆ ಮಾಡಲಾಗಿದೆ. ರೇಖಾ ಶಿವಶಂಕರ ದೇಶಮಾನೆ ಕೊಲೆಗಿಡಾದ ವೃದ್ಧೆ ಅನ್ನೋದು ತಿಳಿದು ಬಂದಿದೆ.
ಮನೆಯಲ್ಲಿ ಒಂಟಿಯಾಗಿದ್ದ ವೃದ್ಧೆಯನ್ನ ನಿದ್ದೆ ಮಂಪರಿನಲ್ಲಿರುವಾಗ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಸೀರೆಯಿಂದ ಉಸಿರುಗಟ್ಟಿಸಿ, ಬಳಿಕ ಹಗ್ಗದಿಂದ ನೇಣು ಬೀಗಿದು ಎಸ್ಕೇಪ್ ಆಗಿದ್ದಾರೆ ಎಂದು ಎಸ್ಪಿ ಪ್ರಕಾಶ ನಿಕ್ಕಂ ತಿಳಿಸಿದ್ದಾರೆ.