ನಮ್ಮ ಕ್ಲಿನಿಕ್ ಸೇವೆ ಪ್ರತಿಯೊಬ್ಬರು ಪಡೆಯಬೇಕು: ಡಾ.ಶಾಂತವೀರ ಮನಗೂಳಿ

258

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ಭಜಂತ್ರಿ ಬಡಾವಣೆಯಲ್ಲಿ ‘ನಮ್ಮ ಕ್ಲಿನಿಕ್’ಅನ್ನು ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ರಾಜ್ಯ ಸರ್ಕಾರ ನಮ್ಮ ಕ್ಲಿನಿಕ್ ಪ್ರಾರಂಭಿಸಿದೆ. ಬಡವರು, ಹಿಂದುಳಿದವರು, ಗರ್ಭಿಣಿಯರು, ವೃದ್ಧರು ಸೇರಿ ಪ್ರತಿಯೊಬ್ಬರು ಈ ಸೇವೆ ಪಡೆಯಬೇಕು ಎಂದರು.

ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ.ಸಂಪತಕುಮಾರ ಗಣಾರಿ ಮಾತನಾಡಿ, ನಮ್ಮ ಕ್ಲಿನಕ್ ನಲ್ಲಿ 12 ಬಗೆಯ ವೈದ್ಯಕೀಯ ಸೇವೆ ಸಿಗಲಿವೆ. ನವಜಾತ ಹಾಗೂ ಶಿಶುವಿನ ಆರೋಗ್ಯ, ಜನನ ಸಮಯದಲ್ಲಿ ಗರ್ಭಿಣಿಯರ ಆರೈಕೆ, ಗರ್ಭ ನಿರೋಧಕ ಸೇವೆ, ಸಾಂಕ್ರಾಮಿಕ ರೋಗಗಳ ನಿವಾರಣೆ, ಲಸಿಕಾ ಸೇವೆ ಸೇರಿದಂತೆ 12 ರೀತಿ ಸೇವೆಗಳು ಸಿಗಲಿವೆ ಎಂದರು. ತಾಲೂಕು ವೈದ್ಯಾಧಿಕಾರಿ ಡಾ.ಇಂಗಳೆ ಮಾತನಾಡಿದರು.

ಈ ವೇಳೆ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಶಕುಂತಲಾ ಹಳ್ಳಿ, ಡಾ.ದಿಪ್ತಿ ಪಾಟೀಲ್, ಡಾ.ಬಿ ಎಸ್.ಅರಳಿಚಂಡಿ, ಡಾ.ಸಂಜಯ ರಾಠೋಡ ಹಾಗೂ ಪ್ರಯೊಗಾಲಯ ತಂತ್ರಜ್ಞಾನ ಅಧಿಕಾರಿ ರಾಜು ನರಗೋದಿ, ಶುಶ್ರೂಷಕ ಅಧಿಕಾರಿ ರಾಯಣ್ಣ ಸನ್ನಳ್ಳಿ, ಸಂತೋಷ ಕಾಳಶಟ್ಟಿ, ಪ್ರಭು ಜಂಗಿನಮಠ, ಮಹಾಲಿಂಗ ಪಕೀರಪೂರ, ಸಿದ್ದು ಚಾಂದಕವಟೆ, ಸುರೇಶ ಬಬಲೇಶ್ವರ, ವಿರೇಂದ್ರ ಪವಾಡೆ, ಸಾಯಬಣ್ಣಾ ಗಣಜಲಗಿ, ಶಶಿಕುಮಾರ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಕುಲಕರ್ಣಿ ನಿರೂಪಿಸಿ ವಂದಿಸಿದರು.




Leave a Reply

Your email address will not be published. Required fields are marked *

error: Content is protected !!