ಸಿಂದಗಿಯಲ್ಲಿ 18 ಜನರಲ್ಲಿ ಕೋವಿಡ್ ಸೋಂಕು

538

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನಲ್ಲಿ ಕರೋನಾ ಹಾವಳಿ ಮುಂದುವರೆದಿದೆ. ಹೀಗಾಗಿ ತಾಲೂಕು ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿ ಇಂದು 18 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ 83ಕ್ಕೆ ಏರಿಕೆಯಾಗಿದೆ.

ಪಟ್ಟಣದಲ್ಲಿರುವ ಎಸ್ ಬಿಐ ಬ್ಯಾಂಕ್ ಸಿಬ್ಬಂದಿಯಲ್ಲಿ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಕಚೇರಿಯನ್ನ ತಾತ್ಕಾಲಿಕ ಸೀಲ್ ಡೌನ್ ಮಾಡಲಾಗಿದೆ. ಈ ಸಂಬಂಧ ನೋಟಿಸ್ ಅಂಟಿಸಲಾಗಿದೆ.

ಪಟ್ಟಣದ 4, ಮಲಗಾಣ ಗ್ರಾಮದಲ್ಲಿ 6, ಮದರಿ 1, ರಾಂಪುರ 1, ಬೊಮ್ಮನಜೋಗಿ 1, ನೂತನ ದೇವರಹಿಪ್ಪರಗಿ ತಾಲೂಕಿನಲ್ಲಿ 4, ದೇವರಹಿಪ್ಪರಗಿ ಪಟ್ಟಣದಲ್ಲಿ 2, ಮುಳಸಾವಳಗಿ 1, ಚಿಕ್ಕರೂಗಿ ಗ್ರಾಮದಲ್ಲಿ 1 ಸೇರಿದಂತೆ 18 ಸೋಂಕು ಪ್ರಕರಣಗಳು ಸಿಂದಗಿ ತಾಲೂಕು ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿ ದಾಖಲಾಗಿವೆ.

ಸೋಂಕಿತರನ್ನ ಪಟ್ಟಣದ ಅಗ್ನಿಶಾಮಕ ಕಚೇರಿ ಹತ್ತಿರವಿರುವ ವಿದ್ಯಾರ್ಥಿ ವಸತಿ ನಿಲಯದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಸೆಂಟರ್ ಗೆ ದಾಖಲಿಸಲಾಗಿದೆ. ನಿಗದಿತ ಆಸ್ಪತ್ರೆಗೆ ದಾಖಲು ಮಾಡಲಾಗುವುದು ಎಂದು ತಾಲೂಕ ಆರೋಗ್ಯ ಅಧಿಕಾರಿ ರಾಮಕೃಷ್ಣ ಇಂಗಳೆ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!