14 ಸಾಧಕರ ‘ನೆನಹು ಮಂದಾರ’ ಲೋಕಾರ್ಪಣೆ

434

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಸಿಂದಗಿ: ಅಕ್ಟೋಬರ್ 28, ಶುಕ್ರವಾರ ಸಂಜೆ ಪಟ್ಟಣದ ಸಂಗಮೇಶ್ವರ ವಿದ್ಯಾಲಯದ ಸಹಯೋಗದೊಂದಿಗೆ ನಡೆದ ನೆಲೆ ಸಂಭ್ರಮ-2022ರ ಕಾರ್ಯಕ್ರಮದಲ್ಲಿ, ಹಿರಿಯ ಸಾಹಿತಿ ಡಾ.ಚನ್ನಪ್ಪ ಕಟ್ಟಿ ಅವರ ನೆನಹು ಮಂದಾರ ಅನ್ನೋ ಕೃತಿ ಲೋಕಾರ್ಪಣೆಗೊಂಡಿತು. ಹಿರಿಯ ಪತ್ರಕರ್ತ ಪ್ರೊ.ಶಾಂತೂ ಹಿರೇಮಠ ಅವರು ಪುಸ್ತಕ ಬಿಡುಗಡೆಗೊಳಿಸಿದರು.

ಸಿಂದಗಿ ನೆಲದ ಹಾಗೂ ನಾಡಿನ ಬೇರೆ ಬೇರೆ ಭಾಗದ 14 ಮಹಾನ್ ಸಾಧಕರ ಬದುಕಿನ ಲೇಖನಗಳ ಗುಚ್ಚವನ್ನು ಈ ಕೃತಿ ಒಳಗೊಂಡಿದೆ. ಲೇಖಕ ಡಾ.ಚನ್ನಪ್ಪ ಕಟ್ಟಿ ಅವರು ಆಯಾ ಕಾಲಘಟ್ಟದಲ್ಲಿ ಬರೆದ ಲೇಖನಗಳ ಸಂಗ್ರಹವೇ ‘ನೆನಹು ಮಂದಾರ’ವಾಗಿದೆ ಎಂದು ಪ್ರೊ.ಶಾಂತು ಹಿರೇಮಠ ಹೇಳಿದರು. ಕೃತಿ ಪರಿಚಯವನ್ನು ಮಿರಗಿಯ ಶಿಕ್ಷಕ ಯಶವಂತರಾಯಗೌಡ ಬಿರಾದಾರ ಮಾಡಿದರು.

ಹಿರಿಯ ಸಂಶೋಧಕ ಡಾ.ಎಂ.ಎಂ ಪಡಶೆಟ್ಟಿ ಅವರು ಆಶಯ ನುಡಿಗಳ ಮೂಲಕ, ನೆಲೆ ಪ್ರಕಾಶ ನಡೆದು ಬಂದ ಹಾದಿಯೊಂದಿಗೆ ಸಭಿಕರನ್ನು ಕರೆದುಕೊಂಡು ಹೋದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಂಶೋಧಕ ಡಾ.ಎಸ್.ಕೆ.ಕೊಪ್ಪ, ಮುಖ್ಯ ಅತಿಥಿಗಳಾದ ನಿವೃತ್ತ ಪ್ರಾಚಾರ್ಯರಾದ ಬಿ.ಪಿ ಕರ್ಜಗಿ ಅವರು, ಚನ್ನಪ್ಪ ಕಟ್ಟಿ ಹಾಗೂ ಎಂ.ಎಂ ಪಡಶೆಟ್ಟಿ ಅವರು ನಡೆಸಿಕೊಂಡು ಬರುತ್ತಿರುವ ಸಾಹಿತ್ಯದ ಪರಿಚಾರಿಕೆಯನ್ನು ತಿಳಿಸಿಕೊಟ್ಟರು.

ಸಾನಿಧ್ಯ ವಹಿಸಿದ್ದ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ನಮ್ಮ ಸ್ಮೃತಿಪಟಲದಿಂದ ಜಾರಿ ಹೋಗುವ ಹಾಗೂ ಮುಂದಿನ ಜನಾಂಗಕ್ಕೆ ತಿಳಿಯದೆ ಹೋಗುವ ಸಾಧಕರನ್ನು ಬರಹದ ಮೂಲಕ ಸದಾ ಜೀವಂತವಾಗಿರುಸುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ನಡೆದ ಕವಿಗೋಷ್ಠಿಯನ್ನು ಹಿರಿಯ ಸಂಶೋಧಕ ಡಿ.ಎನ್ ಅಕ್ಕಿ ಉದ್ಘಾಟಿಸಿದರು. ಹಿರಿಯ ಸಾಹಿತಿ ಡಾ.ಶ್ರೀಶೈಲ ನಾಗರಾಳ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯ್ತಿ ಕೆಡಿಪಿ ಸದಸ್ಯ ಶಿವಕುಮಾರ ಬಿರಾದಾರ, ಸಂಗಮೇಶ್ವರ ವಿದ್ಯಾಲಯದ ಸಂಚಾಲಕ ಗುರುನಾಥ ಅರಳಗುಂಡಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕೆ.ಎಚ್ ಸೋಮಾಪುರ, ಶಿವಕುಮಾರ ಶಿವಸಿಂಪಗೇರ, ಗೀತಯೋಗಿ, ನಾಗೇಶ ತಳವಾರ, ಅಶೋಕ ಬಿರಾದಾರ, ರಾಚು ಕೊಪ್ಪ, ನಟರಾಜ ಕುಂಬಾರ, ಗುರುಭೀಮಸುತ ಸಿದ್ದರಾಮ ಬ್ಯಾಕೋಡ, ಬೀರಪ್ಪ ಪೂಜಾರಿ, ಶಿಲ್ಪಾ ಪತ್ತಾರ, ಎಸ್.ಎಸ್ ಸಾತಿಹಾಳ, ಶೈಲಾ ನ್ಯಾಮಣ್ಣವರ, ಕವಿತಾ ಪಾಟೀಲ ಅವರು ಕವಿತೆ ವಾಚನ ಮಾಡಿದರು. ಚಿದಾನಂದ ಬಂಡಗರ ಅತಿಥಿಗಳ ಸ್ವಾಗತ ಪರಿಚಯ ಮಾಡಿದರು. ದೇವು ಮಾಕೊಂಡ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಪವನ ಕುಲಕರ್ಣಿ, ವೆಂಕಟೇಶ ಕುಲಕರ್ಣಿ ನಿರೂಪಿಸಿದರು. ಚಂದ್ರಶೇಖರ ಚೌರ ವಂದಿಸಿದರು.




Leave a Reply

Your email address will not be published. Required fields are marked *

error: Content is protected !!