‘ಉ.ಕ’ದಲ್ಲಿ ನೋ ಬಂದ್ ಎಫೆಕ್ಟ್

368

ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಬಂದ್ ಎಫೆಕ್ಟ್ ಅಷ್ಟೊಂದು ಪರಿಣಾಮ ಮಾಡಿಲ್ಲ ಅನ್ನೋದು ಕಂಡು ಬರ್ತಿದೆ. ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರಗಿ, ರಾಯಚೂರು ಸೇರಿದಂತೆ ಈ ಭಾಗದ ಜಿಲ್ಲೆಗಳಲ್ಲಿ ಎಂದಿನಂತೆ ಜನಜೀವನ ನಡೆಯುತ್ತಿದೆ.

ಈಗಾಗ್ಲೇ ಬೆಂಗಳೂರಿನಲ್ಲಿ ಕೆಲ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಸಿಎಂ ನಿವಾಸಕ್ಕೆ ಭೇಟಿ ನೀಡ್ತಿದ್ದಾರೆ. ಖಾಸಗಿ ವಲಯದಲ್ಲಿ ಶೇಕಡ 85ರಷ್ಟು ಮೀಸಲಾತಿ ನೀಡಬೇಕು ಎಂದು ಕನ್ನಡಪರ ಸಂಘಟನೆಗಳು ಮನವಿ ಮಾಡಿಕೊಳ್ತಿದ್ದು, ಈ ಸಂಬಂಧ ಸಿಎಂ ಜೊತೆ ಚರ್ಚಿಸಲು ಸಿದ್ಧರಾಗಿದ್ದಾರೆ. ಇದರ ಮಧ್ಯೆ ಬೆಂಗಳೂರಿನಲ್ಲಿ ಸಹ ಭಾರೀ ಪ್ರಮಾಣದಲ್ಲಿ ಬಂದ್ ಪರಿಣಾಮ ಬೀರಿಲ್ಲ ಅಂತಾ ಹೇಳಲಾಗ್ತಿದೆ.

ಅಖಂಡ ಕರ್ನಾಟಕ ಬಂದ್ ಅನ್ನೋದು ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚು ಎಫೆಕ್ಟ್ ಮಾಡಿಲ್ಲ ಅನ್ನಬಹುದು. ವ್ಯಾಪಾರ ವಹಿವಾಟು, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು, ಸಾರಿಗೆ ಸೇವೆ, ದಿನಬಳಕೆ ವಸ್ತುಗಳ ಸೇವೆ ಸೇರಿದಂತೆ ಪ್ರತಿಯೊಂದು ಕಾರ್ಯನಿರ್ವಹಿಸ್ತಿವೆ. ಈಗಾಗ್ಲೇ ಸಿಎಂ ಬಂದ್ ಮಾಡ್ಬೇಡಿ. ಇದ್ರಿಂದ ಏನೂ ಪ್ರಯೋಜನವಿಲ್ಲ. ನನ್ನ ಜೊತೆ ನೇರವಾಗಿ ಬಂದು ಮಾತ್ನಾಡಿ ಅಂದಿದ್ದಾರೆ. ಅಲ್ದೇ, ಕೆಲ ಕನ್ನಡಪರ ಸಂಘಟನೆಗಳು ಈ ಬಂದ್ ನಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಬಂದ್ ಗೆ ಕರೆ ನೀಡಿದ ಸಂಘಟನೆಗಳಿಗೆ ಅವರು ಅಂದುಕೊಂಡಷ್ಟರ ಮಟ್ಟಿಗೆ ಎಫೆಕ್ಟ್ ಆಗದು.




Leave a Reply

Your email address will not be published. Required fields are marked *

error: Content is protected !!