ಪಾಣಿಪತ್ ಚಿತ್ರದ ಟ್ರೇಲರ್ ರಿಲೀಸ್

414

ನಟ ಅರ್ಜುನ ಕಪೂರ, ಸಂಜಯ ದತ್ತ, ಕೃತಿ ಸನೋನ್ ನಟನೆಯ ಐತಿಹಾಸಿಕ ಸಿನ್ಮಾ ಪಾಣಿಪತ್ ಟ್ರೇಲರ್ ರಿಲೀಸ್ ಆಗಿದೆ. ನಿರ್ದೇಶಕ ಅಶುತೋಷ ಗೋವರಿಕರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಮರಾಠ ಯೋಧ ಸದಾಶಿವ ರಾವ್ ಬಾವು ಮತ್ತು ಅಫ್ಘಾನಿಸ್ತಾನದ ದುರ್ರಾನಿ ಸಾಮ್ರಾಟ ಅಹಮದ್ ಶಾ ಅಬ್ದಾಲಿ ನಡುವೆ 1761ರಲ್ಲಿ ನಡೆದ 3ನೇ ಪಾಣಿಪತ್ ಕದನದ ಕಥೆಯನ್ನ ಈ ಚಿತ್ರ ಹೊಂದಿದೆ. ನಟ ಅರ್ಜುನ ಕಪೂರ ಯೋಧ ಸದಾಶಿವ ರಾವ್ ಆಗಿ ಕಾಣಿಸಿಕೊಂಡಿದ್ದಾನೆ. ಈತನ ಪತ್ನಿಯಾಗಿ ನಟಿ ಕೃತಿ ಸನೋನ್ ಕಾಣಿಸಿಕೊಂಡಿದ್ದಾಳೆ. ಅಫ್ಘನ್ ದೊರೆಯಾಗಿ ಸಂಜಯ ದತ್ತ ನಟಿಸಿದ್ದಾರೆ.

ಲಗಾನ್, ಸ್ವದೇಶ್, ಜೋಧಾ ಅಕ್ಬರ್ ಸೂಪರ್ ಹಿಟ್ ಚಿತ್ರಗಳನ್ನ ನೀಡಿದ ನಿರ್ದೇಶಕ ಅಶುತೋಷ ಗೋವರಿಕರ್ ಅವರು ಈ ಚಿತ್ರ ನಿರ್ದೇಶನ ಮಾಡಿದ್ದು, ಡಿಸೆಂಬರ್ 6ಕ್ಕೆ ಸಿನ್ಮಾ ರಿಲೀಸ್ ಮಾಡಲು ಪ್ಲಾನ್ ಮಾಡಿದೆ.




Leave a Reply

Your email address will not be published. Required fields are marked *

error: Content is protected !!