ಮೈಸೂರು, ಮಂಡ್ಯದಲ್ಲಿ ಮಾಂಸ ಮಾರಾಟಕ್ಕೆ ಗ್ರೀನ್ ಸಿಗ್ನಲ್

307

ಮೈಸೂರು/ಮಂಡ್ಯ: ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಮಾಂಸ ಮಾರಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಇದೀಗ ಅದನ್ನ ತೆಗೆದು ಹಾಕಲಾಗಿದೆ. ಹಕ್ಕಿ ಜ್ವರ ಭೀತಿ ದೂರವಾದ ಹಿನ್ನೆಲೆಯಲ್ಲಿ ಕುರಿ, ಕೋಳಿ, ಮೀನು ಮಾಂಸ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಮೈಸೂರಿನಲ್ಲಿ ವಾರದಲ್ಲಿ ಮೂರು ದಿನ ಅವಕಾಶ ನೀಡಲಾಗಿದೆ. ಮಂಗಳವಾರ, ಶುಕ್ರವಾರ ಹಾಗೂ ಭಾನುವಾರ ಮಾತ್ರ ಮಾಂಸ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಮಟನ್ 500 ಹಾಗೂ ಚಿಕನ್ 150 ರೂಪಾಯಿಗೆ ಕೆಜಿ ನೀಡಬೇಕೆಂದು ಆದೇಶಿಸಲಾಗಿದೆ.

ಇನ್ನು ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದಲ್ಲಿಯೂ ಮೂರು ದಿನ ಮಾಂಸ ಮಾರಾಟಕ್ಕೆ ಪುರಸಭೆ ಅನುಮತಿ ನೀಡಿದೆ. ಇಲ್ಲಿಯೂ ಸಹ ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ಮಾಂಸ ಮಾರಾಟ ಪರವಾನಿಗೆ ನೀಡಲಾಗಿದೆ.

ಗುಣಮಟ್ಟದ ಮಾಂಸ ಮಾರಾಟ ಮಾಡಿ, ಜನಸಾಮಾನ್ಯರ ಆರೋಗ್ಯವನ್ನು ಕಾಪಾಡಿ ಎಂದು ಮುಖ್ಯಾಧಿಕಾರಿ ಸತೀಶ ಕುಮಾರ ಮತ್ತು ಪಟ್ಟಣ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ ಮನವಿ ಮಾಡಿದ್ದಾರೆ. ಇದರ ಜೊತೆಗೆ ಅಂಗಡಿಯಲ್ಲಿ ಸ್ವಚ್ಛತೆ ಕಾಪಾಡುವಂತೆ ಸೂಚಿಸಿದ್ದಾರೆ. ಸಾಮಾಜಿಕ ಅಂತರ ಹಾಗೂ ಸ್ವಚ್ಛತೆಯಿಲ್ಲದಿರುವ ಅಂಗಡಿಗಳನ್ನ ಬಂದ್ ಮಾಡಿಸುವುದಾಗಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!