ಜಡೇಜಾ ಪತ್ನಿ ರಿವಾಬಾ ಭರ್ಜರಿ ಗೆಲುವು

148

ಪ್ರಜಾಸ್ತ್ರ ಸುದ್ದಿ

ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಜಾಮ್ ನಗರ ಉತ್ತರ ಮತಕ್ಷೇತ್ರದಿಂದ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಬಿಪೇಂದ್ರಸಿನ್ಹ ಚತುರ್ ಸಿನ್ಹ ಜಡೇಜಾ ವಿರುದ್ಧ ಗೆಲುವು ದಾಖಲಿಸಿದ್ದಾರೆ.

2019ರಲ್ಲಿ ಬಿಜೆಪಿ ಸೇರುವ ಪೂರ್ವದಲ್ಲಿ ರಜಪೂತ್ ಸಂಘಟನೆಯಾದ ಕರ್ಣಿ ಸೇನೆಯ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿದ್ದರು. ರವೀಂದ್ರ ಜಡೇಜಾ ಸಹೋದರಿ ನೈನಾ ಅವರ ಸ್ನೇಹಿತೆಯಾಗಿದ್ದ ರಿವಾಬಾರನ್ನು ಏಪ್ರಿಲ್ 17, 2017ರಂದು ಜಡೇಜಾ ವಿವಾಹವಾದರು.

32 ವರ್ಷದ ರಿವಾಬಾ ಶಾಸಕಿಯಾಗಿದ್ದಾರೆ. ಬಿಜೆಪಿ ತನ್ನ ಹಾಲಿ ಶಾಸಕರಾಗಿದ್ದ ಧರ್ಮೇಂದ್ರ ಸಿಂಗ್ ಜಡೇಜಾ ಅವರ ಬದಲು ರಿವಾಬಾಗೆ ಟಿಕೆಟ್ ನೀಡಿದ್ದರು. ಮೊದಲ ಬಾರಿಗೆ ಸ್ಪರ್ಧಿಸಿ ಶಾಸಕಿಯಾಗಿದ್ದಾರೆ.

ಇಲ್ಲಿ ವಿಶೇಷ ಏನು ಅಂದರೆ ರಿವಾಬಾ ಚಿಕ್ಕಪ್ಪ ಹರಿ ಸಿಂಗ್ ಸೋಲಂಕಿ ಕಾಂಗ್ರೆಸ್ ನಾಯಕರಾಗಿದ್ದರು. ರವೀಂದ್ರ ಜಡೇಜಾ ತಂದೆ ಹಾಗೂ ಸಹೋದರಿ ಕಾಂಗ್ರೆಸ್ ನಲ್ಲಿದ್ದಾರೆ. ಪತ್ನಿ ಮಾತ್ರ ಬಿಜೆಪಿ ಸೇರಿ ಶಾಸಕಿಯಾಗಿದ್ದಾರೆ. ಓರ್ವ ಆಟಗಾರ ಪತ್ನಿಗಾಗಿ ಒಂದು ಪಕ್ಷದ ಪರ ಪ್ರಚಾರ ಮಾಡಿದ್ದು, ಸಾಕಷ್ಟು ಟೀಕೆಗೆ ಗುರಿಯಾಗಿತ್ತು.




Leave a Reply

Your email address will not be published. Required fields are marked *

error: Content is protected !!