ಪುರಸಭೆ ಟ್ಯಾಕ್ಸ್, ಕೆಇಬಿ ಬಿಲ್ ಕಟ್ಟುವ ಸಿಂದಗಿ ಜನರ ಸ್ಥಿತಿ ಇದು.. ಶಾಸಕರೆ ಏನ್ ಹೇಳ್ತೀರಿ?

390

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದಲ್ಲಿರುವ ಅನಧಿಕೃತ ಅಂಗಡಿಗಳ ಕುರಿತು ಸರಣಿ ವರದಿಗಳನ್ನ ಮೊದಲು ಮಾಡಿದ್ದು ಪ್ರಜಾಸ್ತ್ರ ವೆಬ್ ಪತ್ರಿಕೆ. ಬಸವೇಶ್ವರ ಸರ್ಕಲ್ ನಿಂದ ಹಿಡಿದು ವಿವೇಕಾನಂದ ಸರ್ಕಲ್ ವರೆಗೆ, ವಿಜಯಪುರ ರೋಡ್, ಕೋರ್ಟ್ ಸರ್ಕಲ್, ಆಲಮೇಲ ರೋಡ್, ಮೊರಟಗಿ ರೋಡ್ ಸೇರಿದಂತೆ ಅನಧಿಕೃತ ಅಂಗಡಿಗಳ ಕುರಿತು ಸ್ಟೋರಿ ಮಾಡಲಾಗಿದೆ.

ಇದೀಗ ಬಸವೇಶ್ವರ ಸರ್ಕಲ್ ನಿಂದ ವಿವೇಕಾನಂದ ಸರ್ಕಲ್ ವರೆಗಿನ ರಸ್ತೆ ಕೆಲಸ ನಡೆದಿದೆ. ಹೀಗಾಗಿ ಇಲ್ಲಿನ ಅನಧಿಕೃತ ಅಂಗಡಿಗಳನ್ನ ತೆರವುಗೊಳಿಸಲು ಕಾಲವಕಾಶ ಕೊಟ್ಟು ಮುಗಿದು ಹೋಗಿದೆ. ಆದ್ರೆ, ಇಲ್ಲಿಯ ಅಂಗಡಿಗಳು ಮಾತ್ರ ಹಾಗೆ ಉಳಿದಿವೆ. ಕೆಲವರು ಅಂಗಡಿಗಳನ್ನ ಮೊದಲಿಂದ ಜಾಗದಿಂದ ಹಿಂದಕ್ಕೆ ಮಾಡಿಕೊಂಡಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ಇದ್ದೂ ಇಲ್ಲದಂತಾಗಿದೆ. ಇನ್ನು ಕೆಇಬಿ ಅವರು ಕೆಲ ಅಂಗಡಿಗಳ ವಿದ್ಯುತ್ ಸಂಪರ್ಕ ಕಡಿತ ಮಾಡಿ, ಇನ್ನು ಕೆಲವು ಅಂಗಡಿಗಳಿಗೆ ಮಾಡಿಲ್ಲ. ಯಾರ ಒತ್ತಡಕ್ಕೆ ಅಧಿಕಾರಿಗಳು ಈ ಕಣ್ಣಾಮುಚ್ಚಾಲೆ ಆಟವಾಡ್ತಿದ್ದಾರೆ ಅನ್ನೋ ಪ್ರಶ್ನೆ ಮೂಡಿದೆ.

ಈಗಾಗ್ಲೇ ಒಂದು ಭಾಗದಿಂದ ರಸ್ತೆ ಅಗೆಯುವ ಕೆಲಸ ಶುರು ಮಾಡಿದ್ದಾರೆ. ಆದ್ರೆ, ಈ ಭಾಗದಲ್ಲಿರುವ ಅಂಗಡಿಕಾರರು, ಮನೆಯ ನಿವಾಸಿಗಳು ಅಧಿಕೃತ ಜಾಗದಲ್ಲಿದ್ದು ಬಾಡಿಗೆ ಕಟ್ಟುತ್ತಿದ್ದಾರೆ. ವಿದ್ಯುತ್ ಬಿಲ್, ಪುರಸಭೆಗೆ ಟ್ಯಾಕ್ಸ್ ಕಟ್ಟಿಕೊಂಡು ಬರುತ್ತಿದ್ದಾರೆ. ಆದ್ರೆ, ಇವರ ಅಂಗಡಿ, ಮನೆಗೆ ಹೋಗಲು ಸರಿಯಾಗಿ ಜಾಗ ಬಿಟ್ಟಿಲ್ಲ. ಮಳೆಗಾಲ ಇರುವುದ್ರಿಂದ ಈಗಾಗ್ಲೇ ಸಾಕಷ್ಟು ಪರದಾಟ ಶುರುವಾಗಿದೆ. ರಸ್ತೆ ಕೆಲಸ ಮಾಡ್ತಿರುವ ಮ್ಯಾನೇಜರ್ ನ್ನ ಕೇಳಿದ್ರೆ,
ಇದರ ಹಿಂದೆಯೇ ಕಡಿ ಹಾಕಿಕೊಂಡು ಬರುತ್ತೇವೆ. ಸೋಮವಾರದಿಂದ ಆ ಭಾಗದ ರಸ್ತೆ ಕೆಲಸ ಶುರು ಮಾಡ್ತೀವಿ. ಕೆಇಬಿ ಅವರು ಅರ್ಧ ಕಡೆ ಕರೆಂಟ್ ಕಟ್ ಮಾಡ್ಯಾರ. ಇನರ್ಧ ಮಾಡಿಲ್ಲ ಎನ್ನುತ್ತಾರೆ.

ಅನಧಿಕೃತ ಜಾಗದಲ್ಲಿರುವವರನ್ನ ಹಾಗೇ ಬಿಟ್ಟು, ಅಧಿಕೃತವಾಗಿರುವವರಿಗೆ ತೊಂದರೆ ಕೊಡ್ತಿರುವುದು ನೋಡಿದ್ರೆ ಪುರಸಭೆ, ಕೆಇಬಿ, ತಾಲೂಕು ಆಡಳಿತ ಎಷ್ಟೊಂದು ಜಾಣತನ ತೋರಿಸ್ತಿದೆ ಅನ್ನೋದು ಕಂಡು ಬರ್ತಿದೆ. ಶಾಸಕರು ಅಧಿಕೃತ ಇರುವವರ ಪರವೋ ಅನಧಿಕೃತ ಇರುವವರ ಪರವೋ ಅನ್ನೋ ಪ್ರಶ್ನೆ ಜನರಲ್ಲಿ ಮೂಡಿದೆ.




Leave a Reply

Your email address will not be published. Required fields are marked *

error: Content is protected !!