ಪಂಜಾಬ್ ಗೆ 172 ಟಾರ್ಗೆಟ್ ನೀಡಿದ ಚಾಲೆಂಜರ್ಸ್

267

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರಂಭಿಕ ಆಟಗಾರರಾದ ಪಿಂಚ್ 20 ಹಾಗೂ ಪಡಿಕಲ್ 18 ರನ್ ಬಾರಿಸಿ ಔಟ್ ಆದ್ರು.

ಬಳಿಕ ಕ್ಯಾಪ್ಟನ್ ವಿರಾಟ ಕೊಹ್ಲಿ ಹಾಗೂ ವಾಷಿಂಗ್ಟನ್ ಸುಂದರ ಜೊತೆಯಾದ್ರು. ಆದ್ರೆ, ಸುಂದರ ಹೆಚ್ಚು ಹೊತ್ತು ನಿಲ್ಲದೆ 13 ರನ್ ಗೆ ಔಟ್ ಆಗಿ ಹೊರ ನಡೆದ. ಇನ್ನು 360 ಡಿಗ್ರಿ ಖ್ಯಾತಿಯ ಎಬಿಡಿ ಕೇವಲ 2 ರನ್ ಹೊಡೆದು ಶೆಮಿ ಬೌಲಿಂಗ್ ನಲ್ಲಿ ಔಟ್ ಆದ್ರು. ಶಿವಂ ದುಬೆ 23 ರನ್ ಗಳಿಸಿ ಜೋರ್ಡಾನ್ ಬೌಲಿಂಗ್ ನಲ್ಲಿ ಕೆ.ಎಲ್ ರಾಹುಲಗೆ ಕ್ಯಾಚ್ ಕೊಟ್ಟ.

ಇತ್ತ ಇನ್ನೊಂದು ಬದಿಯಲ್ಲಿ ಆಡ್ತಿದ್ದ ಕ್ಯಾಪ್ಟನ್ ಕೊಹ್ಲಿ 48 ರನ್ ಬಾರಿಸಿ ಭರ್ಜರಿಯಾಗಿ ಆಡ್ತಿರುವಾಗ ಶೆಮಿ ಬೌಲಿಂಗ್ ನಲ್ಲಿ ಔಟ್ ಆದ. ಕೊನೆಗೆ ಬೌಲರ್ ಕ್ರಿಸ್ ಮಾರಿಸ್ 3 ಸಿಕ್ಸ್, 1 ಸಮೇತ 8 ಬೌಲಿಗೆ 25 ರನ್ ಬಾರಿಸಿದ. ಇನ್ನು ಉದಾನ್ 10 ರನ್ ಬಾರಿಸಿದ. ಅಂತಿಮವಾಗಿ 20 ಓವರ್ ಗಳಿಗೆ 6 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿ 172 ಟಾರ್ಗೆಟ್ ನೀಡಿತು.




Leave a Reply

Your email address will not be published. Required fields are marked *

error: Content is protected !!