48 ಗಂಟೆ ಡೆಡ್ ಲೈನ್ ಬಳಿಕ ನಾಯಕನ ಸ್ಥಾನದಿಂದ ಕೊಹ್ಲಿ ಔಟ್

710

ಪ್ರಜಾಸ್ತ್ರ ಕ್ರೀಡಾ ಸುದ್ದಿ

ನವದೆಹಲಿ: ಟಿ-20 ಬಳಿಕ ಏಕದಿನ ತಂಡದ ನಾಯಕತ್ವ ಸ್ಥಾನಕ್ಕೂ ವಿರಾಟ್ ಕೊಹ್ಲಿ ಗುಡ್ ಬೈ ಹೇಳಲಿದ್ದಾರೆ ಅನ್ನೋ ಊಹಾಪೋಹ ಎದ್ದಿತ್ತು. ಅದು ಈಗ ನಿಜವಾಗಿದೆ. ಆದರೆ, ಕೊಹ್ಲಿ ತಮ್ಮ ಸ್ಥಾನಕ್ಕೆ ತಾವೇ ರಾಜೀನಾಮೆ ಘೋಷಿಸಿಲ್ಲ. ಬದಲಾಗಿ ಬಿಸಿಸಿಐ ಏಕದಿನ ಪಂದ್ಯಗಳ ನಾಯಕತ್ವ ಸ್ಥಾನವನ್ನು ರೋಹಿತ್ ಶರ್ಮಾಗೆ ವಹಿಸಿದೆ.

ನಾಯಕತ್ವದಿಂದ ಹಿಂದೆ ಸರಿಯುವ ಕುರಿತು 48 ಗಂಟೆಯೊಳಗೆ ತಿಳಿಸಬೇಕೆಂದು ಬಿಸಿಸಿಐ ಡೆಡ್ ಲೈನ್ ನೀಡಿತ್ತು. ಆದರೆ, ಕೊಹ್ಲಿ ಇದ್ಯಾವುದಕ್ಕೂ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ಬಿಸಿಸಿಐ ಆಯ್ಕೆ ಸಮಿತಿ ರೋಹಿತ್ ಶರ್ಮಾ ಸೂಚಿಸಿದೆ. ಈ ಮೂಲಕ ಟೆಸ್ಟ್ ನಾಯಕತ್ವ ಮಾತ್ರ ಕೊಹ್ಲಿಗೆ ವಹಿಸಲಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ತಂಡ ಪ್ರಕಟಿಸದ ಕಾರಣ ಉಪ ನಾಯಕನ ಘೋಷಣೆ ಮಾಡಿಲ್ಲ. ಟೆಸ್ಟ್ ಸರಣಿಗೆ ತಂಡ ಘೋಷಣೆ ಮಾಡಿದೆ. ಇನ್ನು 2023ರ ವಿಶ್ವಕಪ್ ನಾಯಕತ್ವವನ್ನು ರೋಹಿತ್ ಶರ್ಮಾ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!