ಮಾಗಣಗೇರಿ ಶಾಲೆಯಲ್ಲಿ ವಿಜ್ಞಾನ ದಿನಾಚರಣೆ

234

ಪ್ರಜಾಸ್ತ್ರ ಸುದ್ದಿ

ಯಡ್ರಾಮಿ: ತಾಲೂಕಿನ ಮಾಗಣಗೇರಿಯ ಸರ್ಕಾರಿ ಪ್ರೌಢಶಾಲೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಯಿತು. ಸರ್ ಐಸಾಕ್ ನ್ಯೂಟನ್ ಹಾಗೂ ಇಕೊ ಕ್ಲಬ್ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಸಲಾಯಿತು.

ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಜೊತೆಗೆ ವಿದ್ಯಾರ್ಥಿಗಳು ತಯಾರಿಸಿದ ವೈಜ್ಞಾನಿಕ ಪ್ರಾಯೋಗಿಕ ವಸ್ತು ಪ್ರದರ್ಶನ ನಡೆಸಲಾಯಿತು. ಇದನ್ನು ವೀಕ್ಷಿಸಿದ ಅತಿಥಿಗಳು, ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆಯನ್ನು ಮೆಚ್ಚಿಕೊಂಡರು. ಪ್ರಭಾರಿ ಮುಖ್ಯಗುರುಗಳಾದ ಸಣ್ಣಮೈಲಾರಪ್ಪ ಮಾತನಾಡಿ, ವಿದ್ಯಾರ್ಥಿಗಳು ಮಾಡಿದ ವೈಜ್ಞಾನಿಕ ವಸ್ತುಗಳು ನಿಜಕ್ಕೂ ಅದ್ಭುತವಾಗಿವೆ. ನೀವು ಸಹ ವಿಜ್ಞಾನಿಗಳಾದೀರಿ ಎಂದು ಶಹಬ್ಬಾಷಗಿರಿ ಕೊಟ್ಟರು.

ಶಿಕ್ಷಕ ಬಸವರಾಜ ಕುರನಳ್ಳಿ ಮಾತನಾಡಿ, ಸರ್ ಐಸಾಕ್ ನ್ಯೂಟನ್ ವಿಜ್ಞಾನ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಗುರುತ್ವಾಕರ್ಷಣೆಯ ನಿಯಮ ಸೇರಿ ಅನೇಕ ಕೊಡಗೆಗಳು ನಮಗೆ ಸ್ಪೂರ್ತಿ ನೀಡಿವೆ. ಇನ್ನು ವಿದ್ಯಾರ್ಥಿಗಳು ಒಂದು ವಾರ ಪ್ರಾಯೋಗಿಕ ಸಾಮಗ್ರಿಗಳನ್ನು ಕ್ರೂಢೀಕರಿಸಿ ವಸ್ತು ಪ್ರದರ್ಶನ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ಇದೇ ವೇಳೆ ವಿಜ್ಞಾನಿ ಸಿ.ವಿ ರಾಮನ್ ಕುರಿತು ಶಿಕ್ಷಕರಾದ ರವೀಂದ್ರ, ಮಲ್ಲಿಕಾರ್ಜುನಯ್ಯ, ಜಗದೀಶ ಮಾತನಾಡಿದರು. ವಿದ್ಯಾರ್ಥಿ ಪ್ರಜ್ವಲ ದ್ಯಾಮಗೊಂಡ ನಿರೂಪಿಸಿದ, ವಿದ್ಯಾರ್ಥಿನಿಯರಾದ ಭಾಗ್ಯಶ್ರೀ ಸ್ವಾಗತಿಸಿದಳು, ಅಶ್ವಿನಿ ವಂದಿಸಿದಳು. ಶಾಲೆ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!