ಬ್ರೇಕಿಂಗ್ ನ್ಯೂಸ್
Search

ಕಾಮುಕ ಶಿಕ್ಷಕ ಸಿದ್ದರಾಜು ಅಮಾನತು

772

ಮೈಸೂರು: ತನ್ನ ಹಳೆಯ ವಿದ್ಯಾರ್ಥಿನಿಯೊಂದಿಗೆ ಸರಸ ಸಲ್ಲಾಪವಾಡಿದ್ದ ನಂಜನಗೂಡು ತಾಲೂಕಿನ ರಾಂಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಸಿದ್ದರಾಜುನನ್ನ ಅಮಾನತು ಮಾಡಲಾಗಿದೆ. ರಾಸಲೀಲೆಯ ಫೋಟೋಗಳು ವೈರಲ್ ಆಗ್ತಿದ್ದಂತೆ ಕಾಮುಕ ಟೀಚರ್ ಎಸ್ಕೇಪ್ ಆಗಿದ್ದಾನೆ.

58 ವರ್ಷದ ಈತ ವಿದ್ಯಾರ್ಥಿನಿಯೊಂದಿಗೆ ನಡೆಸಿದ ಪಲ್ಲಂಗದಾಟದ ಫೋಟೋಗಳು ವೈರಲ್ ಆಗಿದ್ವು. ಈ ಸಂಬಂಧ ಶಿಕ್ಷಣ ಸಚಿವ ಸುರೇಶಕುಮಾರ ಅಮಾನತು ಆದೇಶ ಹೊರಡಿಸಿದ್ದಾರೆ. ಮೈಸೂರು ಡಿಡಿಪಿಐ ಹಾಗೂ ಬಿಇಒ ಅವರೊಂದಿಗೆ ಮಾತ್ನಾಡಿರುವ ಸಚಿವರು, ಸಿದ್ದರಾಜು ವಿಚಾರಣೆ ಕಾಯ್ದಿರಿಸಿ ಅಮಾನತು ಆದೇಶ ಹೊರಡಿಸಿದ್ದಾರೆ.

ಈ ಕಾಮುಕ ಶಿಕ್ಷಕ ಮಾಜಿ ಸಚಿವ ಡಿ.ಜಿ ಜಯಕುಮಾರ ಅವರ ಆಪ್ತಸಹಾಯಕನಾಗಿದ್ದನಂತೆ. ಈ ಚಪಲ ಚೆನ್ನಿಗರಾಯನಿಗೆ ಇಬ್ಬರು ಹೆಂಡ್ತಿಯರು. ಇದು ಸಾಲದು ಅಂತಾ 20 ವರ್ಷದ ತನ್ನ ಹಳೆಯ ವಿದ್ಯಾರ್ಥಿನಿಯ ಜೊತೆಗೆ ಮೋಜು ಮಸ್ತಿ ಮಾಡಿದ್ದಾನೆ. ಸದ್ಯ ಈತನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈತನ ಘನಂದಾರಿ ಕೆಲಸದಿಂದಾಗಿ ರಾಂಪೂರ ಗ್ರಾಮಸ್ಥರು ಶಿಕ್ಷಕನ ವಿರುದ್ಧ ನಿನ್ನೆ ಪ್ರತಿಭಟನೆ ನಡೆಸಿದ್ರು.




Leave a Reply

Your email address will not be published. Required fields are marked *

error: Content is protected !!