ಹಿರಿಯ ಕಲಾವಿದ ನಿಧನ: ಸ್ಟಾರ್ಸ್ ಸಂತಾಪ

310

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಚಂದನವನದ ಹಿರಿಯ ಕಲಾವಿದ ಶನಿ ಮಹಾದೇವಪ್ಪ(90)ನವರು ಕೋವಿಡ್ 19ನಿಂದಾಗಿ ಸಾವನ್ನಪ್ಪಿದ್ದಾರೆ. ಭಾನುವಾರ ರಾತ್ರಿ ನಗರದ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕನ್ನಡದಲ್ಲಿ ಬರೋಬ್ಬರಿ 550ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಶನಿ ಮಹಾದೇವಪ್ಪನವರ ನಿಧನಕ್ಕೆ ಸಿನಿ ರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಸುದೀಪ, ಪುನೀತ, ಸುಮಲತಾ ಸೇರಿದಂತೆ ಹಲವರು ಟ್ವೀಟರ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಶನಿ ಮಹಾದೇವಪ್ಪನವರು ಡಾ.ರಾಜ್ ಜೊತೆಯಲ್ಲಿಯೇ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಎನ್ನಲಾಗುತ್ತೆ.

ಭಕ್ತ ಕುಂಬಾರ, ಮೂರುವರೆ ವಜ್ರಗಳು, ಶ್ರೀನಿವಾಸ ಕಲ್ಯಾಣ ಸೇರಿದಂತೆ ಸಾಕಷ್ಟು ಸಿನಿಮಾಗಳು ಇಂದಿಗೂ ಜನರ ಮನಸ್ಸಿನಲ್ಲಿ ಉಳಿದಿವೆ. ಅದರಲ್ಲಿ ಕವಿರತ್ನ ಕಾಳಿದಾಸ ಚಿತ್ರದಲ್ಲಿನ ಡಿಂಡಿಂ ಕವಿಯ ಪಾತ್ರವನ್ನ ಯಾರೂ ಮರೆಯಲು ಸಾಧ್ಯವಿಲ್ಲ. ಇಂತಹ ಹಿರಿಯ ಕಲಾವಿದನ ನಿಧನಕ್ಕೆ ಅನೇಕರು ಅಂತಿಮ ನಮನ ಸಲ್ಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!