ಶರಣ ಸಾಹಿತ್ಯ ಪರಿಷತ್ ನೂತನ ಪದಾಧಿಕಾರಿಗಳ ಪದಗ್ರಹಣ

231

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಪಟ್ಟಣದ ಸಾರಂಗಮಠದಲ್ಲಿ ಸೋಮವಾರ ನಡೆಯಿತು. ನೂತನ ಅಧ್ಯಕ್ಷ ಡಾ.ಶರಣಬಸವ ಜೋಗೂರ ಅವರಿಗೆ ಮಾಜಿ ಅಧ್ಯಕ್ಷ ಚನ್ನಪ್ಪ ಕತ್ತಿ ಧ್ವಜ ಹಸ್ತಾಂತರಿಸಿದರು.

ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶರಣರ ಸಾಹಿತ್ಯದಲ್ಲಿ ಸಮಸಮಾಜದ ತತ್ವ ಅಡಗಿದೆ. ಎಲ್ಲ ಜಾತಿ, ಧರ್ಮದವರನ್ನು ಒಳಗೊಳ್ಳುವ ಕೆಲಸವಾಗಬೇಕು. ವಚನಗಳ ಮೂಲಕ ಬದುಕಿನ ನಿಜವಾದ ಪಾಠ ಹೇಳಿದ ಶರಣರು ನಮಗೆ ಆದರ್ಶವಾಗಬೇಕು ಎಂದರು.

ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಮ.ಗು ಯಾದವಾಡ, ಮಾಜಿ ತಾಲೂಕಾಧ್ಯಕ್ಷ ಚನ್ನಪ್ಪ ಕತ್ತಿ ಮಾತನಾಡಿದರು. ಸಾನಿಧ್ಯ ವಹಿಸಿ ಮಾತನಾಡಿದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಶರಣ ಸಾಹಿತ್ಯದಲ್ಲಿ ನಾವೆಲ್ಲರೂ ಭಾಗವಹಿಸುವ ಮೂಲಕ ಆದರ್ಶಯುತ ಬದುಕು ಸಾಗಿಸೋಣ ಎಂದರು.

ಪರಿಷತ್, ಕದಳಿ ವೇದಿಕೆ, ಯುವ ಘಟಕದ ನೂತನ ಪದಾಧಿಕಾರಿಗಳು ಪದಗ್ರಹಣ ಮಾಡಿದರು. ಈ ವೇಳೆ ಅಂಬಣ್ಣ ಗಾಯಕವಾಡ, ಸಿದ್ದಪ್ಪ ಹಿರೇಕುರುಬರ, ಡಾ.ಎಂ.ಎಂ ಪಡಶೆಟ್ಟಿ, ಡಾ.ಚನ್ನಪ್ಪ ಕತ್ತಿ, ಪ್ರೊ.ಎಂ.ಎಸ್ ಹಯ್ಯಾಳಕರ, ಶಿವಾನಂದ ಕಲಬುರ್ಗಿ, ಪರಶುರಾಮ ಕೋಳೂರ ಸೇರಿದಂತೆ ಅನೇಕರು ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!