13 ವರ್ಷಗಳ ಬಳಿಕ ಬಂದ ಸೆಕ್ಸಿ ಶಿಲ್ಪಾ

1824

ನಟಿ ಶಿಲ್ಪಾ ಶೆಟ್ಟಿ ಬರೋಬ್ಬರಿ 13 ವರ್ಷಗಳ ಬಳಿಕ ಬಾಲಿವುಡ್ ಅಂಗಳಕ್ಕೆ ಕಂಬ್ಯಾಕ್ ಮಾಡಿದ್ದಾರೆ. 2007ರಿಂದ ಚಿತ್ರರಂಗದಿಂದ ದೂರವೇ ಉಳಿದಿದ್ದ ನಟಿ ಶಿಲ್ಪಾ ಶೆಟ್ಟಿ, ಇದೀಗ ‘ನಿಕಮ್ಮಾ’ ಅನ್ನೋ ಚಿತ್ರದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ.

2009ರಲ್ಲಿ ಉದ್ಯಮಿ ರಾಜ್ ಕುಂದ್ರಾ ಜೊತೆ ಮದುವೆಗೂ ಎರಡು ವರ್ಷ ಮೊದ್ಲೇ ಚಿತ್ರರಂಗದಿಂದ ದೂರ ಉಳಿದಿದ್ದ ನಟಿ ಮದುವೆ ನಂತ್ರ ಲಾಂಗ್ ಗ್ಯಾಪ್ ತೆಗೆದುಕೊಂಡ್ರು. ಕಾಮಿಡಿ ರೊಮ್ಯಾನ್ಸ್ ಸಿನಿಮಾದ ಮೂಲಕ ಮತ್ತೆ ತಮ್ಮ ಅಭಿಮಾನಿಗಳನ್ನು ರಂಜಿಸಲು ಬರ್ತಿದ್ದಾರೆ.

ಬಿಟೌನ್ ನಲ್ಲಿ ಗಟ್ಟಿಯಾಗಿ ನೆಲೆಯೂರಿದ ಮಂಗಳೂರು ಮೂಲದ ನಟಿ ಶಿಲ್ಪಾ ಶೆಟ್ಟಿ, ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಇದೀಗ 13 ವರ್ಷಗಳ ಗ್ಯಾಪ್ ಬಳಿಕ ಹೊಸ ಉತ್ಸಾಹದಿಂದ ಎಂಟ್ರಿಯಾಗ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!