ನಮ್ಮ ಖಾಸಗಿತನ ಗೌರವಿಸಿ: ಶಿಲ್ಪಾ ಶೆಟ್ಟಿ

275

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಮುಂಬೈ: ಅಶ್ಲೀಲ ಚಿತ್ರ ನಿರ್ಮಾಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಉದ್ಯಮಿ ರಾಜ್ ಕುಂದ್ರಾ ಸಂಬಂಧ ಪತ್ನಿ ಶಿಲ್ಪಾ ಶೆಟ್ಟಿ ಸೇರಿದಂತೆ ಅವರ ಕುಟುಂಬನ್ನ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ನಿಂದಿಸಲಾಗ್ತಿದೆ.

ಶಿಲ್ಪಾ ಶೆಟ್ಟಿ, ಸಹೋದರಿ ಶಮಿತಾ ಶೆಟ್ಟಿ ಹಾಗೂ ಪತಿ ರಾಜ್ ಕುಂದ್ರಾ ಬಗ್ಗೆ ಕೆಟ್ಟದಾಗಿಯೂ ಕಾಮೆಂಟ್ಸ್ ಮಾಡಲಾಗ್ತಿದೆ. ಮಾಧ್ಯಮಗಳಲ್ಲಿಯೂ ದಿನಕ್ಕೊಂದು ಸುದ್ದಿ ಬರ್ತಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ಶಿಲ್ಪಾ ಶೆಟ್ಟಿ, ಮಾಧ್ಯಮಗಳ ವಿಚಾರಣೆಗೆ ನಾನು ಸಿದ್ಧಳಿಲ್ಲ. ಕಾನೂನಿನ ಮೇಲೆ ನಂಬಿಕೆಯಿದೆ. ಓರ್ವ ತಾಯಿಯಾಗಿ ಮಕ್ಕಳ ದೃಷ್ಠಿಯಿಂದ ಮನವಿ ಮಾಡಿಕೊಳ್ಳುತ್ತೇನೆ. ನಮ್ಮ ಖಾಸಗಿತನ ಗೌರವಿಸಿ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!