740 ಕೋಟಿ ರೂಪಾಯಿ ವಂಚನೆ: ರ್ಯಾನ್ ಬಾಕ್ಸಿ ಮಾಜಿ ಪ್ರವರ್ತಕ ಅರೆಸ್ಟ್

330

ನವದೆಹಲಿ: ಬರೋಬ್ಬರಿ 740 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ದೇಶದ ಅತಿದೊಡ್ಡ ಔಷಧಿ ತಯಾರಿಕೆ ಹಾಗೂ ಮಾರಾಟ ಕಂಪನಿಯಾದ ರ್ಯಾನ್ ಬಾಕ್ಸಿಯ ಮಾಜಿ ಪ್ರವರ್ತಕನ ಬಂಧನವಾಗಿದೆ.

ಮಾಜಿ ಪ್ರವರ್ತಕ ಶಿವಿಂದರ ಸಿಂಗ್ ನನ್ನ ದೆಹಲಿ ಪೊಲೀಸ್ರು ಇಂದು ಅರೆಸ್ಟ್ ಮಾಡಿದ್ದಾರೆ. ಈ ಪ್ರಕರಣ ಸಂಬಂಧ ಕಳೆದ ಮಾರ್ಚ್ ನಲ್ಲಿ ಶಿವಂದರ ಸಿಂಗ್ ಹಾಗೂ ಈತನ ಸಹೋದರ ಮಾಲ್ವಿಂದರ ಸಿಂಗ್ ವಿರುದ್ಧ ಕೇಸ್ ದಾಖಲಿಸಿದ್ರು.

ಪೊಲೀಸ್ರಿಗೆ ನೀಡಿದ ದೂರಿನಲ್ಲಿ ಅಕ್ರಮ ಹಣಕಾಸಿನ ವ್ಯವಹಾರ, ನೂರಾರು ಕೋಟಿ ದುರುಪಯೋಗ ಹಾಗೂ ಅಕ್ರಮ ಹಣ ವರ್ಗಾವಣೆ ಸಂಬಂದ, ಕಳೆದ ಆಗಸ್ಟ್ ನಲ್ಲಿ ಇಡಿ ಅಧಿಕಾರಿಗಳು ಸಿಂಗ್ ಸಹೋದರರ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ರು.




Leave a Reply

Your email address will not be published. Required fields are marked *

error: Content is protected !!