ಧ್ರುವ್ ಸರ್ಜಾ ಮದುವೆ ಮುಹೂರ್ತ ಫಿಕ್ಸ್

591

ಕರಾಟೆ ಕಿಂಗ್ ಅರ್ಜುನ್ ಸರ್ಜಾ ಅವರ ಅಳಿಯ, ಕನ್ನಡದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ತಮ್ಮ ಬಾಲ್ಯದ ಗೆಳತಿ ಪ್ರೇರಣಾ ಅವರಿಗೆ ರಿಂಗ್ ತೊಡಿಸುವ ಮೂಲಕ  ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಧ್ರುವ್ ಮತ್ತು ಪ್ರೇರಣಾ ಅವರ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ.

ಧ್ರುವ ಮತ್ತು ಪ್ರೇರಣಾ ಅವರ ಮದುವೆಯನ್ನು ಗುರು- ಹಿರಿಯರು ಮುಂದಿನ ವರ್ಷ ಏಪ್ರಿಲ್ ನಲ್ಲಿ ಫಿಕ್ಸ್ ಮಾಡಿದ್ದಾರೆ. ಆದರೆ ಇನ್ನೂ ದಿನಾಂಕ ನಿಗದಿ ಮಾಡಿಲ್ಲ. ಏಪ್ರಿಲ್ ಕೊನೆಯ ವಾರದಲ್ಲಿ ಮದುವೆ ನಡೆಯಲಿದೆ ಎಂದು ಹೇಳಲಾಗಿದೆ.


ತಮ್ಮ ಬಾಲ್ಯದ ಗೆಳತಿ ಪ್ರೇರಣಾ ಅವರಿಗೆ 21 ಲಕ್ಷದ ವಜ್ರದ ಉಂಗುರವನ್ನು ತೊಡಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ಬನಶಂಕರಿಯ ಆಂಜನೇಯ ಸನ್ನಿಧಿಯಲ್ಲಿ ಸುಂದರ ಹಸಿರು ಮಂಟಪ, ಪವಿತ್ರ ಗೋವುಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ಧ್ರುವ ಸರ್ಜಾ, ತಮ್ಮ ಬಾಲ್ಯದ ಗೆಳತಿ ಪ್ರೇರಣಾ ಅವರಿಗೆ 21 ಲಕ್ಷದ ವಜ್ರದ ಉಂಗುರವನ್ನು ತೊಡಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಸರ್ಜಾ ಕುಟುಂಬದ ಸಡಗರ ಸಂಭ್ರಮದಲ್ಲಿ ಸ್ಯಾಂಡಲ್‍ವುಡ್ ತಾರೆಯರೂ ಹಾಗೂ ಆತ್ಮೀಯ ಸ್ನೇಹಿತರು ಆಗಮಿಸಿ ಶುಭ ಕೋರಿದ್ದಾರೆ. ಶಿವಣ್ಣ, ದರ್ಶನ್, ಪುನೀತ್, ರಾಕ್‍ಲೈನ್ ವೆಂಕಟೇಶ್, ರವಿಶಂಕರ್, ಪ್ರಜ್ವಲ್, ಹರಿಪ್ರಿಯಾ, ಅನು ಪ್ರಭಾಕರ್ ಹಾಗೂ ಹಲವು ಕಲಾವಿದರ ತಂಡ ಧ್ರುವ-ಪ್ರೇರಣಾಗೆ ಶುಭ ಹಾರೈಸಿತು. ಸ್ಯಾಂಡಲ್ ವುಡ್ ನಿರ್ದೇಶಕರಾದ ಅಯೋಗ್ಯ ಮಹೇಶ್, ಬಹದ್ದೂರ್, ಭರ್ಜರಿ ನಿರ್ದೇಶಕ ಚೇತನ್, ಭಜರಂಗಿ ಹರ್ಷ ಹಾಗೂ ಎ.ಪಿ ಅರ್ಜುನ್ ಸಹ ಆಗಮಿಸಿ ಶುಭ ಹಾರೈಸಿದರು.




Leave a Reply

Your email address will not be published. Required fields are marked *

error: Content is protected !!