ಶ್ರೀಶೈಲಗೆ ಹೊರಟ ಭಕ್ತರು ತಪ್ಪದೆ ಓದಬೇಕಾದ ಸ್ಟೋರಿ..

633

ಕಲಬುರಗಿ: ಯುಗಾದಿ ಹಬ್ಬದ ನಿಮಿತ್ಯ ಮಾರ್ಚ್ 23ರಂದು ನಡೆಯುವ ‘ಯುಗಾದಿ ಮಹೋತ್ಸವ’ಕ್ಕೆ ಕರ್ನಾಟಕ ಭಾಗದ ನಾನಾ ಭಾಗದಿಂದ ಬರುವ ಭಕ್ತರಿಗೆ ಕರ್ನೂಲ್ ಜಿಲ್ಲಾಧಿಕಾರಿಯವರು ಸೂಚನೆ ನೀಡಿದ್ದಾರೆ. ಕರೋನಾ ಭೀತಿ ಹಿನ್ನೆಲೆಯಲ್ಲಿ ಈ ಬಾರಿ ಉತ್ಸವವನ್ನ ರದ್ದು ಮಾಡಲಾಗಿದೆ. ಹೀಗಾಗಿ ಕರ್ನೂಲ್ ಜಿಲ್ಲೆ ಮೂಲಕ ಶ್ರೀಶೈಲಗೆ ಹೋಗುವ ಭಕ್ತರಿಗೆ ಮಾರ್ಗಮಧ್ಯದಲ್ಲಿಯೇ ವಾಪಸ್ ಕಳಿಸಲಾಗ್ತಿದೆ.

ವಿಜಯಪುರ, ಬಾಗಲಕೋಟೆ, ಕಲಬುರಗಿ, ಬೆಳಗಾವಿ, ಧಾರವಾಡ, ಬೀದರ, ಯಾದಗಿರಿ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಶ್ರೀಶೈಲ ಮಲ್ಲಿಕಾರ್ಜುನನ ದರ್ಶನಕ್ಕೆ ಪ್ರತಿವರ್ಷ ಹೋಗ್ತಾರೆ. ಅದೇ ರೀತಿ ಈ ವರ್ಷವೂ ಪಾದಯಾತ್ರೆ ಸೇರಿದಂತೆ ವಾಹನಗಳ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹೋಗ್ತಿದ್ದು, ಈ ಸಂಬಂಧ ಜಿಲ್ಲಾಧಿಕಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶ್ರೀಶೈಲ ದೇವಸ್ಥಾನದ ವತಿಯಿಂದ ಭಕ್ತರಲ್ಲಿ ಮನವಿ ಮಾಡಲಾಗಿದೆ.

ಕರೋನಾ ಭೀತಿ ಹಿನ್ನೆಲೆಯಲ್ಲಿ ಯುಗಾದಿ ಹಬ್ಬದ ಮುಂಚಿತ ದಿನಗಳ ಕಾಲ ನಡೆಯುವ ಗ್ರಾಮೋತ್ಸವಂ, ಪ್ರಭೋತ್ಸವಂ, ವೀರಾಚಾರ ವಿನಯಾಸಂ ಸೇರಿದಂತೆ ಯುಗಾದಿ ಹಬ್ಬದಂದು ನಡೆಯುವ ರಥೋತ್ಸವಂ ಆಚರಣೆಗಳನ್ನ ರದ್ದು ಮಾಡಲಾಗಿದೆ. ಹೀಗಾಗಿ ಭಕ್ತರು ಶ್ರೀಶೈಲಕ್ಕೆ ಬರುವುದನ್ನ ನಿಲ್ಲಿಸಬೇಕು ಎಂದು ಮನವಿ ಮಾಡಲಾಗಿದೆ. ಆದ್ದರಿಂದ ಇನ್ಮುಂದೆ ಯಾರಾದ್ರೂ ಶ್ರೀಶೈಲಗೆ ತೆರಳುವ ಪ್ಲಾನ್ ಮಾಡಿದ್ರೆ ನಿಲ್ಲಿಸಿಬಿಡಿ. ಈಗಾಗ್ಲೇ ಯಾರಾದ್ರೂ ಹೋಗಿದ್ರೆ ಅವರ ಗಮನಕ್ಕೆ ಇದನ್ನ ತರುವುದು ಒಳ್ಳೆಯದು.

ಓದುಗರ ಗಮನಕ್ಕೆ




Leave a Reply

Your email address will not be published. Required fields are marked *

error: Content is protected !!