2 ಖತರ್ನಾಕ್ ದರೋಡೆ ಗ್ಯಾಂಗ್ ಬಂಧಿಸಿದ ಖಾಕಿ ಪಡೆ

338

ಬೆಂಗಳೂರು: ತಲಘಟ್ಟಪುರ ಪೊಲೀಸ್ ಠಾಣೆ ಪೊಲೀಸ್ರು ಎರಡು ಖತರ್ನಾಕ್ ದರೋಡೆ ಗ್ಯಾಂಗ್ ಅರೆಸ್ಟ್ ಮಾಡಿದ್ದಾರೆ. ಮನೆ ದರೋಡೆ ಮಾಡ್ತಿದ್ದ ಕಿಲಾಡಿ ಗ್ಯಾಂಗ್ ಇದು. ಈ ಗ್ಯಾಂಗ್ ಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಿಸಿಟಿವಿಯಿಲ್ಲದ ಮನೆಗಳನ್ನ ಟಾರ್ಗೆಟ್ ಮಾಡಿಕೊಂಡು ಬರ್ತಿದ್ದ ಟೀಂನಲ್ಲಿ 6 ಜನ ಕಳ್ಳರಿದ್ದಾರೆ. ಈ ಟೀಂ ಮೊದ್ಲು ಸಿಸಿಟಿವಿ ಇಲ್ಲದ ಮನೆಗಳನ್ನ ಗುರುತು ಹಾಕಿಕೊಳ್ತಿದ್ರು. ಬಳಿಕ ರಾತ್ರಿ ಟೈಂನಲ್ಲಿ ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳತನಕ್ಕೆ ಪ್ಲಾನ್ ಮಾಡ್ತಿದ್ರು. ಈ ಬಂಧಿತ ಟೀಂನಿಂದ 1 ಕೆಜಿ ಬಂಗಾರ ಹಾಗೂ 3 ಕೆಜಿ ಬೆಳ್ಳಿಯನ್ನ ವಶ ಪಡಿಸಿಕೊಳ್ಳಲಾಗಿದೆ.

ಇನ್ನೊಂದು ಟೀಂ ಬೈಕ್ ಗಳನ್ನ ಕಳ್ಳತನ ಮಾಡ್ತಿತ್ತು. 10 ಮಂದಿಯ ಈ ಟೀಂ ಪೊಲೀಸ್ ಬಲೆಗೆ ಬಿದ್ದಿದೆ. ರಾತ್ರಿ ವೇಳೆ ಒಂಟಿಯಾಗಿ ಓಡಾಡುವವರನ್ನ ಬೆದರಿಕೆ ಹಾಕ್ತಿದ್ರು. ಅವರಿಂದ ನಗ ನಾಣ್ಯ ದೋಚುತ್ತಿದ್ರು. ಕಳೆದ ಎರಡು ತಿಂಗಳಲ್ಲಿ ತಲಘಟ್ಟಪುರದಲ್ಲಿ ಬಾರೀ ಕಳ್ಳತನ, ಬೈಕ್ ಕಳ್ಳತನ ಕೃತ್ಯ ನಡೆಯುತಿತ್ತು. ಇದ್ರಿಂದ ಜನ ಭಯದಿಂದ್ರು. ಹೀಗಾಗಿ ಎರಡು ತಂಡಗಳನ್ನ ಮಾಡಿದ ಪೊಲೀಸ್ರು ಖತರ್ನಾಕ್ ಗ್ಯಾಂಗ್ ಗಳನ್ನ ಬಂಧಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!