ರಾಜಕೀಯಕ್ಕೆ ದಳಪತಿ ವಿಜಯ್ ಪಕ್ಷ ಎಂಟ್ರಿ

134

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ಅಧಿಕೃತವಾಗಿ ಇದೀಗ ರಾಜಕೀಯ ಪ್ರವೇಶ ಮಾಡಿದ್ದಾರೆ. ಅದು ತಮ್ಮದೇ ರಾಜಕೀಯ ಪಕ್ಷದ ಮೂಲಕ. ತಮಿಳು ವೆಟ್ರಿ ಕಳಗಂ ಅನ್ನೋ ರಾಜಕೀಯ ಪಕ್ಷ ಘೋಷಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ನಟ ವಿಜಯ್, ತಮಿಳು ವೆಟ್ರಿ ಕಳಗಂ 2024ರ ಲೋಕಸಭಾ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ. ಯಾವುದೇ ಪಕ್ಷಕ್ಕೂ ಬೆಂಬಲ ನೀಡುವುದಿಲ್ಲ. ಇತ್ತೀಚೆಗಷ್ಟೇ ನಾವು ಸಾಮಾನ್ಯ ಹಾಗೂ ಕಾರ್ಯಕಾರಿ ಮಂಡಳಿ ಸಭೆ ನಡೆಸಿದ್ದೇವೆ ಎಂದರು.

ನಾನು ಈಗಾಗ್ಲೇ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮೊದಲು ಪೂರ್ತಿಗೊಳಿಸಬೇಕಿದೆ. ಜೊತೆಗೆ ರಾಜಕೀಯ ಸೇವೆಯಲ್ಲಿ ನನ್ನನ್ನು ತೊಡಗಿಸಿಕೊಳ್ಳಬೇಕಿದೆ. ಹೀಗಾಗಿ ತಮಿಳುನಾಡು ಜನತೆಗೆ ಇದೊಂದು ಕೃತಜ್ಞತೆ ಎಂದು ಹೇಳಿದ್ದಾರೆ.

ತಮಿಳುನಾಡಿನಲ್ಲಿ ಸಿನಿಮಾದವರು ರಾಜಕೀಯಕ್ಕೆ ಬರುವುದು ಹೊಸದಲ್ಲ. ಸೂಪರ್ ಸ್ಟಾರ್ ಎಂ.ಜಿ ರಾಮಚಂದ್ರನ್ ಅವರಿಂದ ಹಿಡಿದು ಇಲ್ಲಿಯ ತನಕ ಹತ್ತು ಹಲವು ಸ್ಟಾರ್ ನಟ, ನಟಿಯರು ರಾಜಕೀಯ ಪ್ರವೇಶಿಸಿದ್ದಾರೆ. ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!